ಐಪಿಎಲ್ 2025 ಕ್ಕೆ ಇಂದಿನಿಂದ ಚಾಲನೆ: ಆರ್ ಸಿಬಿ ವರ್ಸಸ್ ಕೋಲ್ಕತ್ತಾ ಮೊದಲ ಪಂದ್ಯಕ್ಕೇ ಆತಂಕ

Krishnaveni K

ಶನಿವಾರ, 22 ಮಾರ್ಚ್ 2025 (09:11 IST)
Photo Credit: X
ಕೋಲ್ಕತ್ತಾ: ಐಪಿಎಲ್ 2025 ಕ್ಕೆ ಇಂದು ಅಧಿಕೃತವಾಗಿ ಚಾಲನೆ ಸಿಗಲಿದೆ. ಇಂದು ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡ ಮುಖಾಮುಖಿಯಾಗಲಿದೆ. ಆದರೆ ಮೊದಲ ಪಂದ್ಯಕ್ಕೇ ಆತಂಕದ ಕಾರ್ಮೋಡ ಕವಿದಿದೆ.

ಇಂದು ವರ್ಣರಂಜಿತ ಕಾರ್ಯಕ್ರಮದ ಮೂಲಕ ಐಪಿಎಲ್ ಗೆ ಚಾಲನೆ ಸಿಗಲಿದೆ. ಆದರೆ ಮೊದಲ ಪಂದ್ಯ ನಡೆಯುವುದೇ ಅನುಮಾನವೆನ್ನಲಾಗಿದೆ. ಅದಕ್ಕೆ ಕಾರಣ ಹವಾಮಾನ ವರದಿ. ಇಂದಿನ ಪಂದ್ಯಕ್ಕೆ ಮಳೆ ಬರುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಹೇಳಿದೆ. ಹೀಗಾಗಿ ಪಂದ್ಯ ನಡೆಯುವುದೇ ಎಂಬ ಅನುಮಾನ ಶುರುವಾಗಿದೆ.

ಕಳೆದ ಬಾರಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಐಪಿಎಲ್ ಚಾಂಪಿಯನ್ ಆಗಿದ್ದ ಕೆಕೆಆರ್ ಈ ಬಾರಿ ಅಜಿಂಕ್ಯಾ ರೆಹಾನೆ ಎಂಬ ಹಿರಿಯ ಆಟಗಾರನ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿದೆ. ಆದರೆ ಕೆಕೆಆರ್ ಟ್ರಂಪ್ ಕಾರ್ಡ್ ರಿಂಕು ಸಿಂಗ್, ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ ತಂಡದಲ್ಲಿದ್ದಾರೆ.

ಇನ್ನು, ಪ್ರತೀ ಬಾರಿಯೂ ಈ ಸಲ ಕಪ್ ನಮ್ದೇ ಎಂಬ ಉತ್ಸಾಹದಲ್ಲಿ ಕಣಕ್ಕಿಳಿಯುವ ಆರ್ ಸಿಬಿ ಈ ಬಾರಿ ಯುವ ನಾಯಕತ್ವದಲ್ಲಿ, ಸಂಪೂರ್ಣ ಹೊಸ ಟೀಂನೊಂದಿಗೆ ಕಣಕ್ಕಿಳಿಯುತ್ತಿದೆ. ಇವರಿಗೆ ವಿರಾಟ್ ಕೊಹ್ಲಿಯ ಮಾರ್ಗದರ್ಶನ ಮತ್ತು ಸ್ಪೂರ್ತಿಯಿದೆ. ಈ ಕಾರಣಕ್ಕೆ ಈ ಬಾರಿಯಾದರೂ ಕಪ್ ಗೆಲ್ಲಬಹುದು ಎಂಬ ವಿಶ್ವಾಸವಿದೆ. ಈ ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗಲಿದೆ. ಜಿಯೋ ಹಾಟ್ ಸ್ಟಾರ್ ಆಪ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ