IPL 2025: ದುಬಾರಿ ಮೊತ್ತಕ್ಕೆ ಖರೀದಿಯಾದ ಶ್ರೇಯಸ್ ಅಯ್ಯರ್ ಮೊದಲ ಬ್ಯಾಟಿಂಗ್‌ಗೆ ಎಲ್ಲರೂ ಫಿದಾ

Sampriya

ಮಂಗಳವಾರ, 25 ಮಾರ್ಚ್ 2025 (21:37 IST)
Photo Courtesy X
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ 5 ವಿಕೆಟ್ ಕಳೆದು 243 ರನ್ ಗಳಿಸಿತು. ಈ ಮೂಲಕ ಗುಜರಾತ್ ಜೈಂಟ್ಸ್‌ಗೆ 244ರನ್‌ಗಳ ಗೆಲುವಿನ ಟಾರ್ಗೇಟ್ ನೀಡಿತು.

ಪ್ರಭ್ಸಿಮ್ರಾನ್ ಸಿಂಗ್ ಅವರ ಆರಂಭಿಕ ವಿಕೆಟ್ ಕಳೆದುಕೊಂಡ ನಂತರ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಕ್ರೀಸ್‌ಗೆ ಆಗಮಿಸಿ ಬ್ಯಾಕ್‌ ಟು ಬ್ಯಾಕ್ ಸಿಕ್ಸ್‌ ಹಾಗೂ ಬೌಂಡರಿಯೊಂದಿಗೆ ಮ್ಯಾಜಿಕ್ ಮಾಡಿದರು. ‌42 ಎಸೆತಗಳಲ್ಲಿ  97 ರನ್‌ಗಳಿಸಿ ಅಜೇಯವಾಗಿ ಉಳಿದರು. ಶಶಾಂಕ್‌ ಸಿಂಗ್ 16 ಎಸೆತಗಳಲ್ಲಿ 44ರನ್ ಗಳಿಸಿ ತಮ್ಮ ತಂಡಕ್ಕೆ ಕೊಡುಗೆ ನೀಡಿದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನ ಹರಾಜು ಪ್ರಕ್ರಿಯೆಯಲ್ಲಿ ಅತ್ಯಂತ ದುಬಾರಿಗೆ ಖರೀದಿಯಾದ ಶ್ರೇಯಸ್ ಅಯ್ಯರ್‌ ಅವರು ಇದೀಗ ತಮ್ಮ 2025ರ ಚೊಚ್ಚಲ ಪಂದ್ಯದಲ್ಲಿಯೇ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ.

ಗುಜರಾತ್ ಟೈಟಾನ್ಸ್ ಇಂಪ್ಯಾಕ್ಟ್ ಸಬ್‌ಗಳು: ಶೆರ್ಫೇನ್ ರುದರ್‌ಫೋರ್ಡ್, ಗ್ಲೆನ್ ಫಿಲಿಪ್ಸ್, ಇಶಾಂತ್ ಶರ್ಮಾ, ಅನುಜ್ ರಾವತ್, ವಾಷಿಂಗ್ಟನ್ ಸುಂದರ್
ತಂಡಗಳು

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭಾಸಿಮ್ರಾನ್ ಸಿಂಗ್ (ಪ), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ಸಿ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಸೂರ್ಯಾಂಶ್ ಶೆಡ್ಜ್, ಅಜ್ಮತುಲ್ಲಾ ಒಮರ್ಜಾಯ್, ಮಾರ್ಕೊ ಜಾನ್ಸೆನ್, ಅರ್ಷ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ಶುಭಮನ್ ಗಿಲ್ (ಸಿ), ಜೋಸ್ ಬಟ್ಲರ್ (ಡಬ್ಲ್ಯೂ), ಸಾಯಿ ಸುದರ್ಶನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರವಿಶ್ರೀನಿವಾಸನ್ ಸಾಯಿ ಕಿಶೋರ್, ಅರ್ಷದ್ ಖಾನ್, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ