Viral video: ಎಂಥಾ ಕ್ಯಾರೆಕ್ಟರ್ ಗುರೂ.. ಅಭಿಮಾನಿಗಳ ಜೊತೆ ರೋಹಿತ್ ಶರ್ಮಾ ಫನ್
ನಿನ್ನೆ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಮುಂಬೈ ಇಂಡಿಯನ್ಸ್ 4 ವಿಕೆಟ್ ಗಳಿಂದ ಗೆದ್ದುಕೊಂಡಿತು. ಈ ಪಂದ್ಯ ನಡೆದಿರುವುದು ಮುಂಬೈನಲ್ಲಿ. ತವರಿನ ಮೈದಾನದಲ್ಲಿ ರೋಹಿತ್ ಶರ್ಮಾಗೆ ಅಭಿಮಾನಿಗಳು ಕೇಳಬೇಕಾ?
ನಿನ್ನೆಯ ಪಂದ್ಯದಲ್ಲೂ ಡಗ್ ಔಟ್ ಬಳಿ ನಿಂತಿದ್ದ ರೋಹಿತ್ ಶರ್ಮಾ ಹೆಸರೆತ್ತಿ ಹಲವರು ಚಿಯರ್ ಅಪ್ ಮಾಡುತ್ತಿದ್ದರು. ರೋಹಿತ್ ಕೂಡಾ ತಮ್ಮ ಹೆಸರೆತ್ತಿ ಕರೆಯುತ್ತಿದ್ದ ಅಭಿಮಾನಿಗಳಿಗೆ ಪಕ್ಕಾ ಎಂಟರ್ ಟೈನ್ ಮೆಂಟ್ ಮಾಡಿದ್ದಾರೆ.
ನಾಲಿಗೆ ಹೊರ ಚಾಚಿ ಮಕ್ಕಳಂತೆ ಆಕ್ಷನ್ ಮಾಡಿ ಕೊನೆಗೆ ಕುಳಿತುಕೊಳ್ಳುವಂತೆ ಅಭಿಮಾನಿಗಳಿಗೆ ಸನ್ನೆ ಮಾಡಿದ್ದಾರೆ. ಈ ಫನ್ನಿ ವಿಡಿಯೋ ನೋಡಿ ಅಭಿಮಾನಿಗಳು ಅಬ್ಬಾ ಎಂಥಾ ಫನ್ನಿ ಗುರೂ ಎಂದಿದ್ದಾರೆ.