IPL 2025: ಕೊಹ್ಲಿಯಂತೆ ನೋಟ್ ಬುಕ್ ಸೆಲೆಬ್ರೇಷನ್ ಮಾಡಲು ಹೋಗಿ ತಗ್ಲಾಕೊಂಡ ಲಕ್ನೋ ಪ್ಲೇಯರ್ ದಿಗ್ವೇಶ್ ರಾಠಿ

Krishnaveni K

ಬುಧವಾರ, 2 ಏಪ್ರಿಲ್ 2025 (10:28 IST)
ಲಕ್ನೋ: ವಿರಾಟ್ ಕೊಹ್ಲಿಯಂತೆ ನೋಟ್ ಬುಕ್ ಸೆಲೆಬ್ರೇಷನ್ ಮಾಡಲು ಹೋಗಿ ತಗ್ಲಾಕೊಂಡ ಲಕ್ನೋ ಯುವ ಆಟಗಾರ ದಿಗ್ವೇಶ್ ರಾಠಿಗೆ ಈಗ ದಂಡ ವಿಧಿಸಲಾಗಿದೆ.

ಪಂಜಾಬ್ ಕಿಂಗ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯವನ್ನು ಲಕ್ನೋ 8 ವಿಕೆಟ್ ಗಳಿಂದ ಸೋತಿತ್ತು. ಈ ಪಂದ್ಯದಲ್ಲಿ ಪಂಜಾಬ್ ಬ್ಯಾಟಿಂಗ್ ವೇಳೆ ಆರಂಭಿಕ ಪ್ರಿಯಾಂಶ್ ಆರ್ಯ 8 ರನ್ ಗಳಿಸಿ ದಿಗ್ವೇಶ್ ರಾಠಿ ಬೌಲಿಂಗ್ ನಲ್ಲಿ ಕ್ಯಾಚ್ ಔಟ್ ಆದರು.

ಔಟಾಗಿ ಪ್ರಿಯಾಂಶ್ ಪೆವಿಲಿಯನ್ ಗೆ ಮರಳುತ್ತಿದ್ದಾಗ ಅವರ ಬಳಿ ಓಡಿ ಬಂದ ದಿಗ್ವೇಶ್ ನೋಟ್ ಬುಕ್ ಸ್ಟೈಲ್ ಸೆಲೆಬ್ರೇಷನ್ ಮಾಡಿ ಅಣಕ ಮಾಡಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ತಮ್ಮನ್ನು ಕೆಣಿಕಿದ ವೆಸ್ಟ್ ಇಂಡೀಸ್ ಆಟಗಾರರಿಗೆ ಇದೇ ರೀತಿ ಶತಕ ಸಿಡಿಸಿ ನೋಟ್ ಬುಕ್ ಬರೆಯುವಂತೆ ಸನ್ನೆ ಮಾಡಿ ಸೆಲೆಬ್ರೇಷನ್ ಮಾಡಿದ್ದರು.

ಕೊಹ್ಲಿ ಸ್ಟೈಲ್ ನಲ್ಲಿ ಸೆಲೆಬ್ರೇಷನ್ ಮಾಡಿದ ದಿಗ್ವೇಶ್ ಗೆ ಈಗ ಬಿಸಿಸಿಐ ತಕ್ಕ ದಂಡ ವಿಧಿಸಿದೆ. ಯುವ ಆಟಗಾರನ ವರ್ತನೆಗೆ ಪಂದ್ಯದ ಶುಲ್ಕದಲ್ಲಿ ಶೇ.25 ರಷ್ಟು ದಂಡ ವಿಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ