IPL 2025: ಸ್ಟೈಲ್ ಆಗಿ ಆರ್ ಸಿಬಿ ಕ್ಯಾಂಪ್ ಸೇರಿಕೊಂಡ ವಿರಾಟ್ ಕೊಹ್ಲಿ ವಿಡಿಯೋ
ಈ ಬಾರಿ ಐಪಿಎಲ್ ಮಾರ್ಚ್ 22 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಆರ್ ಸಿಬಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯವಾಡಲಿದೆ. ಈ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ.
ಇದಕ್ಕಾಗಿ ಈಗಾಗಲೇ ಆರ್ ಸಿಬಿ ಸಿದ್ಧತೆ ಶುರು ಮಾಡಿದೆ. ಬಹುತೇಕ ಆಟಗಾರರು ಆರ್ ಸಿಬಿ ಕ್ಯಾಂಪ್ ಸೇರಿಕೊಂಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಬಂದಿರಲಿಲ್ಲ. ಚಾಂಪಿಯನ್ಸ್ ಟ್ರೋಫಿ ಫೈನಲ್ ಮುಗಿಸಿಕೊಂಡು ಕೊಹ್ಲಿ ಸ್ವಲ್ಪ ಬ್ರೇಕ್ ಪಡೆದುಕೊಂಡಿದ್ದು ಇಂದು ಆರ್ ಸಿಬಿ ತಂಡ ಸೇರಿಕೊಂಡಿದ್ದಾರೆ.
ಹೊಸ ಹೇರ್ ಸ್ಟೈಲ್ ನಲ್ಲಿ ಕೊಹ್ಲಿ ಮಿರ ಮಿರ ಮಿಂಚುತ್ತಿದ್ದಾರೆ. ಕೊಹ್ಲಿ ಆಗಮನವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಜನ ಸಂಭ್ರಮದಿಂದ ಸ್ವಾಗತಿಸಿದ್ದಾರೆ.