ಟೀಂ ಇಂಡಿಯಾ ಕ್ರಿಕೆಟಿಗರು ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದರೆ ಕೋಚ್ ಗೌತಮ್ ಗಂಭೀರ್ ಗಿದೆ ಬೇರೆಯೇ ಟಾಸ್ಕ್

Krishnaveni K

ಗುರುವಾರ, 13 ಮಾರ್ಚ್ 2025 (12:10 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಇನ್ನು ಐಪಿಎಲ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದರೆ ಇತ್ತ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾತ್ರ ಬೇರೆಯೇ ಟಾಸ್ಕ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಇನ್ನು ಎರಡು ತಿಂಗಳ ಕಾಲ ಐಪಿಎಲ್ ಜಾತ್ರೆ ನಡೆಯಲಿದೆ. ಟೀಂ ಇಂಡಿಯಾದ ಎಲ್ಲಾ ಆಟಗಾರರೂ ತಮ್ಮ ತಮ್ಮ ಫ್ರಾಂಚೈಸಿಗಳನ್ನು ಕೂಡಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಬೇರೆ ಯಾವುದೇ ಸರಣಿಗಳಿಲ್ಲ. ಹೀಗಾಗಿ ಕ್ರಿಕೆಟಿಗರ ಗಮನ ಕೇವಲ ಐಪಿಎಲ್ ನಲ್ಲಿರಲಿದೆ.

ಆದರೆ ಇದಾದ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಬೇಕಿದೆ. ಜೂನ್ ನಲ್ಲಿ ಈ ಸರಣಿ ನಡೆಯಲಿದೆ. ಗಂಭೀರ್ ಕೋಚ್ ಆದ ಬಳಿಕ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ನಲ್ಲಿ ಹೇಳಿಕೊಳ್ಳುವಂತಹ ಆಟ ಪ್ರದರ್ಶಿಸಿಲ್ಲ. ಹೀಗಾಗಿ ಕೆಂಪು ಚೆಂಡಿನ ಫಾರ್ಮ್ಯಾಟ್ ನಲ್ಲಿ ಉತ್ತಮ ಪ್ರದರ್ಶನ ತೋರಲೇಬೇಕಾದ ಒತ್ತಡ ಕೋಚ್ ಗೌತಮ್ ಗಂಭೀರ್ ಗೂ ಇದೆ.

ಹೀಗಾಗಿ ಈ ಟೆಸ್ಟ್ ಸರಣಿಗೆ ಮೊದಲು ಗಂಭೀರ್ ಟೆಸ್ಟ್ ತಂಡಕ್ಕೆ ರೂಪುರೇಷೆ ಸಿದ್ಧಪಡಿಸಲಿದ್ದಾರೆ. ಹೊಸ ಪ್ರತಿಭೆಗಳ ಹುಡುಕಾಟ ಮಾಡಲಿದ್ದಾರೆ. ಅಲ್ಲದೆ, ಜೂನ್ ನಲ್ಲಿ ಭಾರತ ಎ ತಂಡದ ಜೊತೆಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡು ಪ್ರತಿಭಾವಂತ ಆಟಗಾರರನ್ನು ಒಟ್ಟುಗೂಡಿಸುವ ಕೆಲಸ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ