ಕೊನೆಗೂ ಹೆಂಡತಿಯ ಮುಖ ರಿವೀಲ್ ಮಾಡಿದ ಇರ್ಫಾನ್ ಪಠಾಣ್

Krishnaveni K

ಸೋಮವಾರ, 5 ಫೆಬ್ರವರಿ 2024 (09:38 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಮಾಜಿ ವೇಗಿ ಇರ್ಫಾನ್ ಪಠಾಣ್ ತಮ್ಮ ಧರ್ಮಕ್ಕೆ ಎಷ್ಟು ನಿಷ್ಠರಾಗಿದ್ದಾರೆ ಎಂಬುದು ಅವರ ಅಭಿಮಾನಿಗಳಿಗೆಲ್ಲಾ ಗೊತ್ತು.

ಇರ್ಫಾನ್ ಪಠಾಣ್ ತಮ್ಮ ಪತ್ನಿಯ ಮುಖವನ್ನು ಇದುವರೆಗೆ ಬಹಿರಂಗಪಡಿಸದೇ ಇರುವುದೇ ಇದಕ್ಕೆ ಸಾಕ್ಷಿ. ಮುಸ್ಲಿಂ ಧರ್ಮದಲ್ಲಿ ಮಹಿಳೆಯರ ಮುಖವನ್ನು ಗಂಡನ ಹೊರತು ಅನ್ಯ ಪುರುಷರು ನೋಡುವಂತಿಲ್ಲ. ಅಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕುವಂತಿಲ್ಲ. ಇದನ್ನೇ ಇಷ್ಟು ವರ್ಷಗಳಿಂದ ಇರ್ಫಾನ್ ಕೂಡಾ ಆಚರಿಸಿಕೊಂಡು ಬಂದಿದ್ದರು.

ಇದುವರೆಗೆ ಇರ್ಫಾನ್ ಹಲವು ಬಾರಿ ತಮ್ಮ ಫ್ಯಾಮಿಲಿ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು ಇದೆ. ಆದರೆ ಇದುವರೆಗೆ ಇರ್ಫಾನ್ ಎಲ್ಲಿಯೂ ತಮ್ಮ ಪತ್ನಿ ಸಫಾ ಬೇಗ್ ಮುಖವನ್ನು ಸಾರ್ವಜನಿಕವಾಗಿ ತೋರಿಸಿರಲಿಲ್ಲ.

ಆದರೆ ಇದೀಗ ತಮ್ಮ 8 ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭ ಇರ್ಫಾನ್ ತಮ್ಮ ಪತ್ನಿಯ ಮುಖ ಕಾಣುವಂತಹ ಫೋಟೋವೊಂದನ್ನು ಪ್ರಕಟಿಸಿ ಶುಭ ಕೋರಿದ್ದಾರೆ. ಸಫಾ ಬೇಗ್ ಗೆ ಭಾವನಾತ್ಮಕ ಸಂದೇಶದ ಜೊತೆಗೆ ಶುಭ ಕೋರಿದ ಇರ್ಫಾನ್ ತಮ್ಮಿಬ್ಬರ ಸುಂದರ ಫೋಟೋವನ್ನೂ ಪ್ರಕಟಿಸಿದ್ದಾರೆ.

2016 ರಲ್ಲಿ ಇರ್ಫಾನ್ ಮತ್ತು ಸಫಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರಿಗೂ ಈಗ  ಇಮ್ರಾನ್ ಮತ್ತು ಸುಲೈಮಾನ್ ಎನ್ನುವ ಇಬ್ಬರು ಗಂಡು ಮಕ್ಕಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ