ಗೌತಮ್ ಗಂಭೀರ್ ಮಿಸ್ ಕಾಲ್ ಕೊಡುತ್ತಿದ್ದರು, ಇರ್ಫಾನ್ ಪಠಾಣ್ ಡೇಟಿಂಗ್ ಮಾಡಿದ್ದರು: ನಟಿ ಪಾಯಲ್ ಘೋಷ್

ಶನಿವಾರ, 2 ಡಿಸೆಂಬರ್ 2023 (10:40 IST)
Photo Courtesy: Twitter
ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ನನಗೆ ಮಿಸ್ ಕಾಲ್ ಕೊಡುತ್ತಿದ್ದರು. ಇರ್ಫಾನ್ ಪಠಾಣ್ ಜೊತೆ ಐದು ವರ್ಷ ಡೇಟಿಂಗ್ ಮಾಡಿದ್ದೆ ಎಂದು ನಟಿ ಪಾಯಲ್ ಘೋಷ್ ಹೇಳಿಕೆ ನೀಡಿದ್ದು ಈಗ ವೈರಲ್ ಆಗಿದೆ.

ಹಿಂದಿ ಮತ್ತು ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಪಾಯಲ್ ಘೋಷ್ ಕೆಲವು ಕ್ರಿಕೆಟಿಗರು, ಸೆಲೆಬ್ರಿಟಿಗಳ ವಿರುದ್ಧ ಆರೋಪ ಮಾಡಿದ್ದಾಳೆ. ಗಂಭೀರ್, ಇರ್ಫಾನ್ ಬಗ್ಗೆ ಹೇಳಿಕೆ ನೀಡಿದ ನಟಿ, ನಿರ್ದೇಶಕ ಅನುರಾಗ್ ಕಶ್ಯಪ್ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದೂ ಆರೋಪಿಸಿದ್ದಾರೆ.

ಪಾಯಲ್ ಘೋಷ್ ಯಾರು ಎಂದು ಯೋಚಿಸುತ್ತಿದ್ದವರು ಕೆಲವು ದಿನಗಳ ಮೊದಲು ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ಮದುವೆಯಾಗಲು ಸಿದ್ಧ ಎಂದು ಹೇಳಿಕೆ ನೀಡಿದ್ದನ್ನು ನೆನಪಿಸಿಕೊಳ್ಳಬಹುದು. ಇದೀಗ ಆಕೆ ಕ್ರಿಕೆಟಿಗರ ಬಗ್ಗೆ ವೈರಲ್ ಹೇಳಿಕೆ ನೀಡಿದ್ದಾರೆ.

‘ಗೌತಮ್ ಗಂಭೀರ್ ಮತ್ತು ನಟ ಅಕ್ಷಯ್ ಕುಮಾರ್ ನನ್ನ ಹಿಂದೆ ಬಿದ್ದಿದ್ದರು. ಆದರೆ ಇರ್ಫಾನ್ ಜೊತೆ ನಿಜವಾಗಿಯೂ ಪ್ರೀತಿಯಿತ್ತು. ಐದು ವರ್ಷ ಡೇಟಿಂಗ್ ಮಾಡಿದ್ದೆ. ಗಂಭೀರ್ ನಿರಂತರವಾಗಿ ಮಿಸ್ ಕಾಲ್ ಕೊಡುತ್ತಿದ್ದರು. ಅಷ್ಟೇ ಅಲ್ಲ, ಯೂಸುಫ್ ಪಠಾಣ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯರನ್ನೂ ಭೇಟಿಯಾಗಿದ್ದೆ. ಗಂಭೀರ್, ಅಕ್ಷಯ್ ನನ್ನ ಹಿಂದೆ ಬಿದ್ದಿದ್ದರು. ಆದರೂ ನನ್ನ ಪ್ರೀತಿ ಇರ್ಫಾನ್ ಮೇಲೆ ಮಾತ್ರವಿತ್ತು. ಇರ್ಫಾನ್ ಜೊತೆ 2016 ರಲ್ಲಿ ಬ್ರೇಕಪ್ ಆದಾಗ ನಾನು ಅನಾರೋಗ್ಯಕ್ಕೀಡಾದೆ.  ಅನುರಾಗ್ ನನ್ನ ಮೇಲೆ ಅತ್ಯಾಚಾರ ಮಾಡಿದ್ದರು. ಆದರೆ ಅಕ್ಷಯ್ ಒಳ್ಳೆಯ ವ್ಯಕ್ತಿ. ಅವರ ಕಾಲ ಧೂಳಿಗೂ ಅನುರಾಗ್ ಸಮಾನರಲ್ಲ. ಅಕ್ಷಯ್ ನನ್ನನ್ನು ಗೌರವದಿಂದ ನಡೆಸಿಕೊಂಡರು. ಹೀಗಾಗಿ ನನಗೆ ಅವರ ಮೇಲೆ ವಿಶೇಷ ಗೌರವವಿದೆ’ ಎಂದು ಪಾಯಲ್ ನೀಡಿರುವ ಹೇಳಿಕೆ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ