ಐಸಿಸಿ ಭಾರತದ ಮಾತು ಕೇಳಲ್ಲ: ಪಾಕ್ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಲೇವಡಿ

ಶನಿವಾರ, 23 ಫೆಬ್ರವರಿ 2019 (09:11 IST)
ಇಸ್ಲಾಮಾಬಾದ್: ವಿಶ್ವಕಪ್ ನಿಂದ ಪಾಕಿಸ್ತಾನವನ್ನು ಬಹಿಷ್ಕರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮನವಿ ಮಾಡಿದರೂ ಐಸಿಸಿ ಭಾರತದ ಮಾತಿಗೆ ಬೆಲೆ ಕೊಡಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಹೇಳಿದ್ದಾರೆ.


ಪಾಕಿಸ್ತಾನದೊಂದಿಗೆ ಕ್ರಿಕೆಟ್ ಮಾತ್ರವಲ್ಲ, ಎಲ್ಲಾ ರೀತಿಯ ಕ್ರೀಡಾ ಸಂಬಂಧವನ್ನೂ ಕಡಿದುಕೊಳ್ಳಬೇಕು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿಕೆಗೆ ತಿರುಗೇಟು ಕೊಟ್ಟ ಮಿಯಾಂದಾದ್ ಬಹುಶಃ ಗಂಗೂಲಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆಯಿರಬೇಕು ಎಂದು ಲೇವಡಿ ಮಾಡಿದ್ದಾರೆ.

‘ಬಹುಶಃ ಗಂಗೂಲಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವಿರಬೇಕು. ಅವರ ದೇಶದಲ್ಲಿ ಚುನಾವಣೆ  ಸಂದರ್ಭದಲ್ಲಿ ಜನರನ್ನು ಸೆಳೆಯಲು ಇಂತಹದ್ದೇ ಗಿಮಿಕ್ ಮಾಡ್ತಾರೆ. ಒಂದು ವೇಳೆ ಭಾರತ ಮನವಿ ಮಾಡಿದರೂ ಐಸಿಸಿ ಅವರ ಮನವಿ ಪುರಸ್ಕರಿಸಿ ಪಾಕಿಸ್ತಾನವನ್ನು ಬಹಿಷ್ಕರಿಸಲ್ಲ. ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ವಿಶ್ವಕಪ್ ನಲ್ಲಿ ಭಾಗವಹಿಸಲು ಐಸಿಸಿ ಅವಕಾಶ ನೀಡುತ್ತದೆ’ ಎಂದು ಮಿಯಾಂದಾದ್ ವ್ಯಂಗ್ಯ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ