ವಿಜಯ್ ಹಜಾರೆ ಟ್ರೋಫಿ: ಶಾರುಖ್ ಅಬ್ಬರ, ಕರ್ನಾಟಕಕ್ಕೆ ಹೀನಾಯ ಸೋಲು

ಮಂಗಳವಾರ, 21 ಡಿಸೆಂಬರ್ 2021 (16:49 IST)
ಜೈಪುರ: ವಿಜಯ್ ಹಜಾರೆ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ 151 ರನ್ ಗಳ ಹೀನಾಯ ಸೋಲುಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ಆರಂಭದಲ್ಲಿ ಭರ್ಜರಿ ಅಡಿಪಾಯ ಹಾಕಿ ಅಂತಿಮ ಐದು ಓವರ್ ನಲ್ಲಿ 60 ರನ್ ಬಾಚಿ ಭರ್ಜರಿ ಮೊತ್ತ ಕಲೆ ಹಾಕಿತು. ತಮಿಳುನಾಡು ಪರ ಶಾರುಖ್ ಖಾನ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಆರು ಸಿಕ್ಸರ್, ಏಳು ಬೌಂಡರಿ ಚಚ್ಚಿ 39 ಎಸೆತಗಳಲ್ಲಿ 79 ರನ್ ಕಲೆ ಹಾಕಿದರು. ಇದರಿಂದಾಗಿ ತಮಿಳುನಾಡು 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 354 ರನ್ ಗಳ ಭರ್ಜರಿ ಮೊತ್ತ ಕಲೆ ಹಾಕಿತು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕರ್ನಾಟಕ ಸಂಪೂರ್ಣ ಮುಗ್ಗರಿಸಿತು. ಎಸ್. ಶರತ್ 43, ಅಭಿನವ್ ಮನೋಹರ್ 34, ಕೆ. ಸಿದ್ಧಾರ್ಥ್ 29, ರೋಹನ್ ಕದಂ 24 ರನ್ ಗಳಿಸಿದರು. ದೇವದತ್ತ್ ಪಡಿಕ್ಕಲ್ ಶೂನ್ಯ, ನಾಯಕ ಮನೀಶ್ ಪಾಂಡೆ ಕೇವಲ 9 ರನ್ ಗಳಿಸಿ ಔಟಾಗಿದ್ದು ದುಬಾರಿಯಾಯಿತು. ಅಂತಿಮವಾಗಿ ಕರ್ನಾಟಕ 39 ಓವರ್ ಗಳಲ್ಲಿ ಕೇವಲ 203 ರನ್ ಗಳಿಗೆ ಆಲೌಟ್ ಆಗಿ ಹೀನಾಯ ಸೋಲೊಪ್ಪಿಕೊಂಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ