ರಣಜಿ ಟ್ರೋಫಿ ಕ್ರಿಕೆಟ್: ಕುಸಿದ ಅಗ್ರರು, ಕರ್ನಾಟಕಕ್ಕೆ ನಿಶ್ಚಲ್ ಆಸರೆ
ಇದಕ್ಕೂ ಮೊದಲು ಪ್ರಥಮ ಇನಿಂಗ್ಸ್ ನಲ್ಲಿ ವಿದರ್ಭ 307 ಕ್ಕೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಕರ್ನಾಟಕಕ್ಕೆ ರವಿಕಾಂತ್ ಸಮರ್ಥ್, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿಯಂತಹ ಪ್ರಮುಖ ಆಟಗಾರರು ಬೇಗನೇ ಔಟಾಗುವ ಮೂಲಕ ಆಘಾತ ಸಿಕ್ಕಿತು.
ಆದರೆ ಐದನೇ ವಿಕೆಟ್ ಗೆ ಜತೆಯಾದ ದೇಗಾ ನಿಶ್ಚಲ್ ಮತ್ತು ಶ್ರೇಯಸ್ ಗೋಪಾಲ್ 62 ರನ್ ಗಳ ಜತೆಯಾಟವಾಡಿ ಚೇತರಿಕೆ ನೀಡಿದರು. ಶ್ರೇಯಸ್ 30 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ನಿಶ್ಚಲ್ ಗೆ ಜತೆಯಾದ ವಿಕೆಟ್ ಕೀಪರ್ ಶರತ್ 46 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕರ್ನಾಟಕಕ್ಕೆ ವಿದರ್ಭದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 99 ರನ್ ಗಳ ಅಗತ್ಯವಿದೆ. ಆದರೆ ಪ್ರಮುಖ ಬ್ಯಾಟ್ಸ್ ಮನ್ ಗಳು ಔಟಾಗಿರುವುದರಿಂದ ಹಾದಿ ಕಠಿಣವಾಗಿದೆ.