ಕೊಲಂಬೊ: ಹಲವು ದಿನಗಳ ಬಳಿಕ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಿರುವ ಕೆಎಲ್ ರಾಹುಲ್ ತಾವೆಂಥಾ ಉಪಯುಕ್ತ ಆಟಗಾರ ಎಂಬುದನ್ನು ನಿನ್ನೆಯ ಪಂದ್ಯದಲ್ಲಿ ನಿರೂಪಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟಿಗನಾಗಿ ರಾಹುಲ್ ಕಣಕ್ಕಿಳಿದಿದ್ದರು. ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುತ್ತಿದ್ದಾಗ ಕೆಎಲ್ ರಾಹುಲ್ ನಾಯಕ ರೋಹಿತ್ ಶರ್ಮಾರನ್ನೇ ಸುಮ್ಮನಾಗಿಸಿ ತಪ್ಪು ನಿರ್ಧಾರ ತೆಗೆದುಕೊಳ್ಳದಂತೆ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶ್ರೀಲಂಕಾ ಇನಿಂಗ್ಸ್ ನ 14 ನೇ ಓವರ್ ನಲ್ಲಿ ಶಿವಂ ದುಬೆ ಬೌಲಿಂಗ್ ನಲ್ಲಿ ಪಥುಮ್ ನಿಸಂಕಾ ಮೈ ಸವರಿಕೊಂಡು ಬಾಲ್ ಕೀಪರ್ ಕೈ ಸೇರಿತ್ತು. ಈ ವೇಳೆ ರಾಹುಲ್ ಸೇರಿದಂತೆ ಎಲ್ಲಾ ಆಟಗಾರರೂ ಕ್ಯಾಚ್ ಔಟ್ ಗೆ ಮನವಿ ಮಾಡಿದರು. ಆದರೆ ಬಳಿಕ ರಾಹುಲ್ ಗೆ ಇದು ಬ್ಯಾಟ್ ಗೆ ಸವರಿಲ್ಲ ಎನ್ನುವುದು ಖಚಿತವಾಗಿತ್ತು.
ಹೀಗಾಗಿ ಡಿಆರ್ ಎಸ್ ತೆಗೆದುಕೊಳ್ಳಬೇಕೋ ಎನ್ನುವ ಗೊಂದಲದಲ್ಲಿದ್ದ ರೋಹಿತ್ ಬಳಿ ಹೋದ ರಾಹುಲ್ ಡಿಆರ್ ಎಸ್ ತೆಗೆದುಕೊಳ್ಳದಂತೆ ಕನ್ವಿನ್ಸ್ ಮಾಡಿದರು. ರಾಹುಲ್ ಮಾತಿಗೆ ಒಪ್ಪಿದ ರೋಹಿತ್ ಡಿಆರ್ ಎಸ್ ತೆಗೆದುಕೊಳ್ಳಲಿಲ್ಲ. ರಿಪ್ಲೇ ನೋಡಿದಾಗ ರಾಹುಲ್ ನಿರ್ಧಾರ ಸರಿಯಾಗಿತ್ತು. ಈ ಮೂಲಕ ಭಾರತಕ್ಕೆ ಒಂದು ರಿವ್ಯೂವನ್ನು ರಾಹುಲ್ ಉಳಿಸಿದ್ದರು. ಈ ಹಿಂದೆ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸಂದರ್ಭದಲ್ಲೂ ರಾಹುಲ್ ವಿಕೆಟ್ ಕೀಪರ್ ಆಗಿ ಡಿಆರ್ ಎಸ್ ವಿಚಾರದಲ್ಲಿ ರೋಹಿತ್ ಗೆ ಕರಾರುವಾಕ್ ಆಗಿ ಸಲಹೆ ನೀಡುತ್ತಿದ್ದರು.