ಆ ಘಟನೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಸ್ವಾಭಿಮಾನ ಬಿಟ್ಟು ನೀವು ಆ ತಂಡದಲ್ಲಿ ಇರಬೇಡಿ, ಮುಂದಿನ ಸಲ ಆರ್ ಸಿಬಿಗೆ ಬನ್ನಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದರು. ಅದರಂತೆ ರಾಹುಲ್ ಈ ಬಾರಿ ಮತ್ತೆ ತಮ್ಮ ತವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರುವುದು ಬಹುತೇಕ ಖಚಿತವಾಗಿದೆ.
ಇತ್ತೀಚೆಗೆ ಲಕ್ನೋ ಮಾಲಿಕ ಸಂಜಯ್ ಗೊಯೆಂಕಾರನ್ನು ಅವರ ಕಚೇರಿಯಲ್ಲಿ ರಾಹುಲ್ ಭೇಟಿಯಾಗಿದ್ದರು. ಬಳಿಕ ಸಂಜಯ್ ಗೊಯೆಂಕಾ ರಾಹುಲ್ ನಮ್ಮ ತಂಡದ ಅವಿಭಾಜ್ಯ ಅಂಗ ಎಂದಿದ್ದರು. ಆಗ ಅಭಿಮಾನಿಗಳು ನಿಮಗೆ ಆತ್ಮಗೌರವಕ್ಕಿಂತ ದುಡ್ಡೇ ಹೆಚ್ಚಾಯಿತೇ ಎಂದು ರಾಹುಲ್ ರನ್ನು ಪ್ರಶ್ನಿಸಿದ್ದರು. ಆದರೆ ಈಗ ಲಕ್ನೋ ಆಫರ್ ತಿರಸ್ಕರಿಸಿ ಬೇರೆ ತಂಡ ಸೇರಲು ರಾಹುಲ್ ನಿರ್ಧರಿಸಿರುವುದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.