ಫಾರ್ಮ್ ನಲ್ಲಿಲ್ಲದ ಕೆಎಲ್ ರಾಹುಲ್ ಕಿತ್ತೊಗೆಯಲು ಹೆಚ್ಚಿದ ಒತ್ತಡ

ಬುಧವಾರ, 28 ನವೆಂಬರ್ 2018 (08:45 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲೂ ಫಾರ್ಮ್ ಗೆ ಮರಳಲು ವಿಫಲರಾದ ಕೆಎಲ್ ರಾಹುಲ್ ರನ್ನು ಟೆಸ್ಟ್ ತಂಡದ ಆಡುವ ಬಳಗದಿಂದ ಕೈ ಬಿಡಲು ಒತ್ತಾಯ ಹೆಚ್ಚಾಗಿದೆ.


ಕೆಎಲ್ ರಾಹುಲ್ ಕಳೆದ ಹಲವು ತಿಂಗಳಿನಿಂದ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ವಿದೇಶ ಮಾತ್ರವಲ್ಲ, ವೆಸ್ಟ್ ಇಂಡೀಸ್ ವಿರುದ್ಧ ಭಾರತದಲ್ಲೇ ನಡೆದ ಸರಣಿಯಲ್ಲೂ ರಾಹುಲ್ ಸಾಧನೆ ಶೂನ್ಯವಾಗಿತ್ತು.

ಹೀಗಾಗಿ ಮಾಜಿ ಕ್ರಿಕೆಟಿಗರಾದ ಸಂಜಯ್ ಮಂಜ್ರೇಕರ್, ಸುನಿಲ್ ಗವಾಸ್ಕರ್ ರಾಹುಲ್ ಬದಲಿಗೆ ರೋಹಿತ್ ಶರ್ಮಾ ಮತ್ತು ಪೃಥ್ವಿ ಶಾ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆರಂಭಿಕರಾಗಲಿ ಎಂದು ಸಲಹೆಯಿತ್ತಿದ್ದಾರೆ. ರೋಹಿತ್ ಶರ್ಮಾ ಕೂಡಾ ತಂಡದಲ್ಲಿರುವುದರಿಂದ ರಾಹುಲ್ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯುವುದೂ ಡೌಟ್. ಅದರ ಜತೆಗೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳಿಂದಲೂ ಕಳಪೆ ಫಾರ್ಮ್ ನಿಂದಾಗಿ ತೀವ್ರ ಟೀಕೆಗೊಳಗಾಗಿದ್ದಾರೆ. ಹೀಗಾಗಿ ತಾವು ಚೊಚ್ಚಲ ಟೆಸ್ಟ್ ಆಡಿದ ಆಸ್ಟ್ರೇಲಿಯಾ ನೆಲದಲ್ಲಿ ಮತ್ತೆ ಟೆಸ್ಟ್ ಆಡುವ ಕನಸು ರಾಹುಲ್ ಗೆ ಕಠಿಣವೇ ಸರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ