ಡಬ್ಲ್ಯುಪಿಎಲ್: ಡೆಲ್ಲಿ ಕ್ಯಾಪಿಟಲ್ಸ್-ಗುಜರಾತ್ ಜೈಂಟ್ಸ್ ಹಣಾಹಣಿ ಇಂದು

ಗುರುವಾರ, 16 ಮಾರ್ಚ್ 2023 (09:29 IST)
ಮುಂಬೈ: ಡಬ್ಲ್ಯುಪಿಎಲ್ ಕೂಟದಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವೆ ಹಣಾಹಣಿ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ನಡೆದ ಐದು ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಸೋತು ಉಳಿದ ನಾಲ್ಕೂ ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಪಡೆದುಕೊಂಡಿದೆ. ಹೀಗಾಗಿ ಇಂದು ಗೆದ್ದರೆ ಡೆಲ್ಲಿ ಪ್ಲೇ ಆಫ್ ಸ್ಥಾನ ಗಟ್ಟಿಯಾಗಲಿದೆ.

ಅತ್ತ ಗುಜರಾತ್ ಇದುವರೆಗೆ ನಡೆದ ಐದು ಪಂದ್ಯಗಳ ಪೈಕಿ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಕಂಡಿದೆ. ಹೀಗಾಗಿ ಪ್ಲೇ ಆಫ್ ಕನಸು ಕ್ಷೀಣವಾಗಿದೆ. ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತಿರುವ ಗುಜರಾತ್ ಇಂದು ಮೇಲೇಳುತ್ತಾ ಕಾದು ನೋಡಬೇಕು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ