ಮೊದಲ ಏಕದಿನಕ್ಕೆ ರೋಹಿತ್ ಶರ್ಮಾ ಗೈರಾಗಲು ಕಾರಣ ಬಹಿರಂಗ

ಗುರುವಾರ, 16 ಮಾರ್ಚ್ 2023 (09:10 IST)
Photo Courtesy: Twitter
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಾಳೆ ನಡೆಯಲಿರುವ ಮೊದಲ ಏಕದಿನ ಪಂದ್ಯದಿಂದ ಖಾಯಂ ನಾಯಕ ರೋಹಿತ್ ಶರ್ಮಾ ಹೊರಗುಳಿದಿದ್ದಾರೆ.

ತಂಡದ ಆಯ್ಕೆ ಸಂದರ್ಭದಲ್ಲೇ ರೋಹಿತ್ ಕೌಟುಂಬಿಕ ಕಾರಣ ನೀಡಿ ಮೊದಲ ಏಕದಿನ ಪಂದ್ಯಕ್ಕೆ ತಮ್ಮನ್ನು ಪರಿಗಣಿಸಬೇಡಿ ಎಂದು ಮನವಿ ಮಾಡಿದ್ದರು. ಅದರಂತೆ ನಾಳೆಯ ಪಂದ್ಯಕ್ಕೆ ರೋಹಿತ್ ಗೆ ವಿನಾಯ್ತಿ ನೀಡಲಾಗಿದೆ.

ಹಾಗಿದ್ದರೆ ಆ ಕೌಟುಂಬಿಕ ಕಾರಣವೇನು ಎಂಬುದು ಇದೀಗ ಬಯಲಾಗಿದೆ. ಮೂಲಗಳ ಪ್ರಕಾರ ರೋಹಿತ್ ತಮ್ಮ ಬಾವನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಏಕದಿನ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಕೊನೆಯ ಎರಡು ಏಕದಿನ ಪಂದ್ಯಗಳ ವೇಳೆ ಅವರು ಮತ್ತೆ ತಂಡದ ನಾಯಕರಾಗಿ ಕಮ್ ಬ್ಯಾಕ್ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ