ಕೆಎಲ್ ರಾಹುಲ್ ನಿನ್ನೆ ಸಂಜೆ ಒಂದು ಘೋಷಣೆ ಮಾಡಬೇಕಿದೆ. ಕಾಯ್ತಾ ಇರಿ ಎಂದು ಪೋಸ್ಟ್ ಒಂದನ್ನು ಮಾಡಿದ್ದರು. ಇದರ ಬೆನ್ನಲ್ಲೇ ಅವರು ನಿವೃತ್ತಿ ಹೇಳಬಹುದಾ, ಆರ್ ಸಿಬಿಗೆ ಸೇರುವ ಬಗ್ಗೆ ಹೇಳಬಹುದಾ ಎಂದೆಲ್ಲಾ ಊಹಾಪೋಹಗಳು ಹರಿದಾಡಿದ್ದವು. ಇಂದು ರಾಹುಲ್ ಇನ್ ಸ್ಟಾ ಸ್ಟೋರಿಯಲ್ಲಿ ನಿವೃತ್ತಿ ಬಗ್ಗೆ ಘೋಷಣೆ ಮಾಡಿರುವ ಪೋಸ್ಟ್ ಒಂದು ವೈರಲ್ ಆಗಿದೆ.
ಆದರೆ ಅಸಲಿ ಕತೆ ಬೇರೆಯೇ ಇದೆ. ಅಸಲಿಗೆ ಇಂತಹದ್ದೊಂದು ಸ್ಟೋರಿಯನ್ನು ರಾಹುಲ್ ಪೋಸ್ಟ್ ಮಾಡಿಯೇ ಇಲ್ಲ. ಯಾರೋ ನಿನ್ನೆ ರಾಹುಲ್ ಘೋಷಣೆ ಮಾಡಬೇಕಿದೆ ಎಂದಿದ್ದಕ್ಕೆ ಅವರದೇ ಸ್ಟೋರಿಯಲ್ಲಿ ಅವರು ನಿವೃತ್ತಿ ಮೆಸೇಜ್ ಬರೆದಿರುವಂತೆ ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದುವರೆಗೆ ರಾಹುಲ್ ಆಗಲೀ ಬಿಸಿಸಿಐ ಆಗಲೀ ಅವರ ನಿವೃತ್ತಿ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಯಾರೋ ಹರಡುತ್ತಿರುವ ಸುಳ್ಳು ಸುದ್ದಿಗೆ ಕಿವಿಗೊಡಬೇಡಿ.