ವಿಶ್ವಕಪ್ ಟಿಕೆಟ್ ಗಾಗಿ ನನಗೆ ಮೆಸೇಜ್ ಮಾಡಲೇಬೇಡಿ! ಗೆಳೆಯರಿಗೆ ವಾರ್ನ್ ಮಾಡಿದ ಕೆಎಲ್ ರಾಹುಲ್
ಕ್ರಿಕೆಟಿಗರಿಗೆ ಎರಡು ಟಿಕೆಟ್ ಉಚಿತವಾಗಿ ಸಿಗುತ್ತದೆ. ಈ ಟಿಕೆಟ್ ನ್ನು ಅವರು ತಮ್ಮ ಆಪ್ತರಿಗೆ ನೀಡಬಹುದು. ಹೀಗಾಗಿ ಆಯಾ ಕ್ರಿಕೆಟಿಗರು ತಮ್ಮ ತವರಿನಲ್ಲಿ ಆಡುವಾಗ ತಮ್ಮ ಗೆಳೆಯರು, ಕುಟುಂಬದವರು ಟಿಕೆಟ್ ಗಾಗಿ ಬೇಡಿಕೆಯಿಡುವುದು ಸಾಮಾನ್ಯ.
ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಈ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ತಮ್ಮ ಗೆಳೆಯರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಯಾರೂ ನನಗೆ ಟಿಕೆಟ್ ಗಾಗಿ ಮೆಸೇಜ್ ಮಾಡಬೇಡಿ. ನಾನು ಅದಕ್ಕೆ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ಯಾಕೆಂದರೆ ನಾನು ನನ್ನ ಬ್ಯಾಟಿಂಗ್ ಬಗ್ಗೆ ಗಮನ ಕೇಂದ್ರೀಕರಿಸಬೇಕು ಎಂದಿದ್ದಾರೆ. ಈಗಾಗಲೇ ತಮ್ಮ ಆಪ್ತರಿಂದ ಟಿಕೆಟ್ ಗಾಗಿ ಸಾಕಷ್ಟು ಬೇಡಿಕೆ ಬಂದಿರುವ ವಿಚಾರವನ್ನೂ ಅವರು ಹೊರಹಾಕಿದ್ದಾರೆ. ಆದರೆ ಯಾರಿಗೂ ನಾನು ಟಿಕೆಟ್ ಅರೇಂಜ್ ಮಾಡಿಕೊಡಲ್ಲ ಎಂದಿದ್ದಾರೆ.