ಗೌತಮ್ ಗಂಭೀರ್ ಮೆಂಟರ್ ಕೆಲಸಕ್ಕೇ ಕುತ್ತು?! ಲಕ್ನೋ ಮಾಲಿಕರ ಅಸಮಾಧಾನ

ಗುರುವಾರ, 25 ಮೇ 2023 (16:35 IST)
ಚೆನ್ನೈ: ಐಪಿಎಲ್ 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೆಂಟರ್ ಗೌತಮ್ ಗಂಭೀರ್ ಅವರ ಆಕ್ರಮಣಕಾರಿ ವರ್ತನೆ ಮತ್ತು ನವೀನ್ ಉಲ್ ಹಕ್ ವಿವಾದಗಳಿಂದಲೇ ಸುದ್ದಿಯಾಗಿದೆ.

ಇದೀಗ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತ ಬಳಿಕ ಲಕ್ನೋ ಮಾಲಿಕ ಸಂಜೀವ್ ಗೊಯೆಂಕಾ ಮೆಂಟರ್ ಗೌತಮ್ ಗಂಭೀರ್ ವಿರುದ್ಧ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ. ಲಕ್ನೋ ಈ ಪಂದ್ಯದಲ್ಲಿ ಕೇವಲ 101 ರನ್ ಗಳಿಗೆ ಆಲೌಟ್ ಹೀನಾಯ ಸೋಲು ಕಂಡಿತ್ತು.

ಈ ಸೋಲಿನ ಬಳಿಕ ಸಂಜೀವ್ ಗೊಯೆಂಕಾ ಮೈದಾನದಲ್ಲೇ ಮೆಂಟರ್ ಗಂಭೀರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಮುಂದಿನ ಸೀಸನ್ ನಲ್ಲಿ ಅವರ ಕೆಲಸಕ್ಕೆ ಕುತ್ತು ಬರಬಹುದು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಕೊಹ್ಲಿ-ಗಂಭೀರ್ ಜೊತೆ ಘರ್ಷಣೆ ನಡೆದಾಗಲೇ ಸಂಜೀವ್ ಗೊಯೆಂಕಾ ವಿರಾಟ್ ಕೊಹ್ಲಿ ಜೊತೆ ಸೌಹಾರ್ದಯುತ ಮಾತುಕತೆ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ