ನವೀನ್ ಉಲ್ ಹಕ್ ವಿರುದ್ಧ ಮುಂಬೈ ಆಟಗಾರರಿಂದ ‘ಮ್ಯಾಂಗೋ’ ರಿವೆಂಜ್

ಗುರುವಾರ, 25 ಮೇ 2023 (16:20 IST)
ಚೆನ್ನೈ: ಐಪಿಎಲ್ 2023 ರ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸೋಲಿಸಿದ ಬಳಿಕ ಮುಂಬೈ ಇಂಡಿಯನ್ಸ್ ಆಟಗಾರರು ಕೊಹ್ಲಿ ಕೆಣಕಿದ್ದ ಲಕ್ನೋದ ನವೀನ್ ಉಲ್ ಹಕ್ ವಿರುದ್ಧ ‘ಮ್ಯಾಂಗೋ’ ರಿವೆಂಜ್ ತೆಗೆದುಕೊಂಡಿದ್ದಾರೆ.

ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ-ನವೀನ್ ಉಲ್ ಹಕ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ನವೀನ್ ಒಮ್ಮೆ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಾಗ ಸೋಷಿಯಲ್ ಮೀಡಿಯಾದಲ್ಲಿ ಮಾವಿನ ಹಣ್ಣನ್ನು ಸವಿಯುವ ಫೋಟೋ ಹಾಕಿ ‘ಸ್ವೀಟ್ ಮ್ಯಾಂಗೋ’ ಎಂದು ಬರೆದುಕೊಂಡಿದ್ದರು. ಇದು ಆರ್ ಸಿಬಿ ಮಾತ್ರವಲ್ಲ, ಭಾರತದ ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದೀಗ ಲಕ್ನೋವನ್ನು ಸೋಲಿಸಿ ಐಪಿಎಲ್ 2023 ರಿಂದ ಹೊರದಬ್ಬಿದ ಬಳಿಕ ಮುಂಬೈ ತಂಡದ ಮೂವರು ಯುವ ಆಟಗಾರರು ಮೂರು ಮಾವಿನ ಹಣ್ಣನ್ನು ಟೇಬಲ್ ಮೇಲಿರಿಸಿ ಅದರ ಎದುರು ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು ನವೀನ್ ಗೆ ಟಾಂಗ್ ಕೊಡುವಂತೆ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ