ಟಿ20 ವಿಶ್ವಕಪ್ ಗೆ ವಿರಾಟ್ ಕೊಹ್ಲಿ ಅಮೆರಿಕಾ ತಲುಪುವ ದಿನ ನಿಗದಿ

Krishnaveni K

ಸೋಮವಾರ, 27 ಮೇ 2024 (16:51 IST)
ಮುಂಬೈ: ಐಪಿಎಲ್ ಮುಗಿದ ಬೆನ್ನಲ್ಲೇ ಕ್ರಿಕೆಟಿಗರು ಟಿ20 ವಿಶ್ವಕಪ್ ಗೆ ತಯಾರಾಗುತ್ತಿದ್ದಾರೆ. ಟೀಂ ಇಂಡಿಯಾ ಮೊದಲ ಬ್ಯಾಚ್ ಈಗಾಗಲೇ ಅಮೆರಿಕಾ ತಲುಪಿದೆ. ಆದರೆ ವಿರಾಟ್ ಕೊಹ್ಲಿ ಇನ್ನೂ ತಂಡವನ್ನು ಕೂಡಿಕೊಂಡಿಲ್ಲ.

ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ರಿಷಬ್ ಪಂತ್, ಮೊಹಮ್ಮದ್ ಸಿರಾಜ್, ಅಕ್ಸರ್ ಪಟೇಲ್ ಮತ್ತಿತರರು ಈಗಾಗಲೇ ಅಮೆರಿಕಾಗೆ ತೆರಳಿದ್ದಾರೆ.

ಆದರೆ ಈ ತಂಡದ ಜೊತೆಗೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಇರಲಿಲ್ಲ. ಇದೀಗ ವಿರಾಟ್ ತಂಡವನ್ನು ಯಾವಾಗ ಕೂಡಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಮೂಲಗಳ ಪ್ರಕಾರ ಅವರು ಮೊದಲ ಅಭ್ಯಾಸ ಪಂದ್ಯದ ವೇಳೆಗೆ ತಂಡದ ಜೊತೆಗಿರಲಿದ್ದಾರೆ.

ಟೀಂ ಇಂಡಿಯಾ ಮೊದಲ ಅಭ್ಯಾಸ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಜೂನ್ 1 ರಂದು ಆಡಲಿದೆ. ಈ ವೇಳೆ ಕೊಹ್ಲಿ ತಂಡದ ಜೊತೆಗಿರಲಿದ್ದಾರೆ ಎನ್ನಲಾಗಿದೆ. ಆದರೆ ಮೊದಲ ಅಭ್ಯಾಸ ಪಂದ್ಯದಲ್ಲಿ ಅವರು ಆಡಲಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ