ಮುಂದಿನ ವರ್ಷ ಮಹಿಳೆಯರಿಗೂ ಐಪಿಎಲ್ ಮಾಡಿ

ಶುಕ್ರವಾರ, 27 ಮಾರ್ಚ್ 2020 (09:41 IST)
ಮುಂಬೈ: ಮುಂದಿನ ವರ್ಷದಿಂದ ಮಹಿಳೆಯರಿಗೂ ಐಪಿಎಲ್ ಕೂಟ ನಡೆಸಿ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ತಾರೆ ಮಿಥಾಲಿ ರಾಜ್ ಬಿಸಿಸಿಐಗೆ ಮನವಿ ಮಾಡಿದ್ದಾರೆ.


‘ನನ್ನ ಪ್ರಕಾರ ಇನ್ನು ಹೆಚ್ಚು ಸಮಯ ಕಾಯುವುದರಲ್ಲಿ ಅರ್ಥವಿಲ್ಲ. ತಡಮಾಡದೇ ಬಿಸಿಸಿಐ ಮುಂದಿನ ವರ್ಷದಿಂದಲೇ ಮಹಿಳೆಯರಿಗೂ ಐಪಿಎಲ್ ಶುರು ಮಾಡಬೇಕು. ಸಣ್ಣ ಪ್ರಮಾಣದಲ್ಲೇ ಆದರೂ ಸರಿಯೇ’ ಎಂದು ಮಿಥಾಲಿ ಹೇಳಿದ್ದಾರೆ.

ಅಂದಿನಿಂದಲೂ ಮಿಥಾಲಿ ಮಹಿಳೆಯರ ಕ್ರಿಕೆಟ್ ಕೂಡಾ ಇತ್ತೀಚೆಗೆ ಪಾಪ್ಯುಲರ್ ಆಗುತ್ತಿದೆ. ಮಹಿಳೆಯರ ಕ್ರಿಕೆಟ್ ಇನ್ನಷ್ಟು ಬೆಳೆಯಬೇಕಾದರೆ ಐಪಿಎಲ್ ನಂತಹ ಕ್ರೀಡಾ ಕೂಟ ನಡೆಸಬೇಕು ಎಂದು ವಾದಿಸುತ್ತಲೇ ಇದ್ದಾರೆ. ಅವರ ಮನವಿಯನ್ನು ಬಿಸಿಸಿಐ ಪುರಸ್ಕರಿಸುತ್ತಾ ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ