ಮೊಹಮ್ಮದ್ ಸಿರಾಜ್ ಮತ್ತೆ ವಿಶ್ವ ನಂ.1 ಬೌಲರ್

ಗುರುವಾರ, 21 ಸೆಪ್ಟಂಬರ್ 2023 (09:30 IST)
ಮುಂಬೈ: ಏಷ್ಯಾ ಕಪ್ ಫೈನಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಮತ್ತೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಬೌಲರ್ ಆಗಿ ಹೊರಹೊಮ್ಮಿದ್ದಾರೆ.

ಜನವರಿಯಲ್ಲಿ ಮೊಹಮ್ಮದ್ ಸಿರಾಜ್ ಮೊದಲ ಬಾರಿಗೆ ನಂ.1 ಬೌಲರ್ ಆಗಿದ್ದರು. ಆದರೆ ಬಳಿಕ ಮಾರ್ಚ್ ನಲ್ಲಿ ಆಸೀಸ್ ನ ಜೋಶ್ ಹೇಝಲ್ ವುಡ್ ಅವರ ಸ್ಥಾನವನ್ನು ಕಬಳಿಸಿದ್ದರು. ಇದೀಗ ಏಷ್ಯಾ ಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬೆನ್ನಲ್ಲೇ ಸಿರಾಜ್ ಮತ್ತೆ ನಂ.1 ಏಕದಿನ ಬೌಲರ್ ಆಗಿದ್ದಾರೆ.

ಇನ್ನು, ಏಷ್ಯಾ ಕಪ್ ನಲ್ಲಿ ಸರಣಿ ಶ್ರೇಷ್ಠರಾಗಿದ್ದ ಭಾರತೀಯ ಸ್ಪಿನ್ನರ್ ಕುಲದೀಪ್ ಯಾದವ್ 3 ಸ್ಥಾನ ಕೆಳಕ್ಕೆ ಜಾರಿದ್ದು 9 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ