ದಿಡೀರ್ ಆಗಿ ಆಸ್ಟ್ರೇಲಿಯಾ ಸರಣಿಗೆ ಅಶ್ವಿನ್ ಆಯ್ಕೆಯಾಗಿದ್ದು ಹೇಗೆ?!

ಗುರುವಾರ, 21 ಸೆಪ್ಟಂಬರ್ 2023 (09:00 IST)
ಮುಂಬೈ: ಏಷ್ಯಾ ಕಪ್, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದಿದ್ದ ಹಿರಿಯ ಸ್ಪಿನ್ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ರನ್ನು ಇದೀಗ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಅಷ್ಟಕ್ಕೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಅಶ್ವಿನ್ ರನ್ನು ಆಸ್ಟ್ರೇಲಿಯಾ ಏಕದಿನ ಸರಣಿಗೆ ಆಯ್ಕೆ ಮಾಡಲು ಕಾರಣವಾಗಿದ್ದು ಅಕ್ಸರ್ ಪಟೇಲ್ ಗಾದ ಗಾಯ.

ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಅಕ್ಸರ್ ಪಟೇಲ್ ಏಷ್ಯಾ ಕಪ್ ನಲ್ಲಿ ಗಾಯಗೊಂಡಿದ್ದು, ಸೆಪ್ಟೆಂಬರ್ 28 ರೊಳಗಾಗಿ ಅವರು ಚೇತರಿಸಿಕೊಳ್ಳದೇ ಹೋದರೆ ವಿಶ್ವಕಪ್ ತಂಡದ ಭಾಗವಾಗಲು ಸಾಧ‍್ಯವಾಗದು. ಅಂತಹ ಸಂದರ್ಭದಲ್ಲಿ ವಿಶ್ವಕಪ್ ತಂಡಕ್ಕೆ ಅಶ್ವಿನ್ ಆಯ್ಕೆಯಾಗಬಹುದು. ಅಶ್ವಿನ್ ರನ್ನು ನೇರವಾಗಿ ವಿಶ್ವಕಪ್‍ ಗೆ ಆಯ್ಕೆ ಮಾಡುವ ಮುನ್ನ ಆಸ್ಟ್ರೇಲಿಯಾ ಸರಣಿಯಲ್ಲಿ ಅವಕಾಶ ನೀಡಿ ಆಡಿಸುವುದು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಲೆಕ್ಕಾಚಾರ. ಇದಕ್ಕಾಗಿಯೇ ಅವರನ್ನು ದಿಡೀರ್ ಆಗಿ ಆಸೀಸ್ ಸರಣಿಗೆ ಆಯ್ಕೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ