ಟಿ20 ವಿಶ್ವಕಪ್: ಟೀಂ ಇಂಡಿಯಾ ಸ್ಪಿನ್ನರ್ ಗಳಿಂದ ಬಂದ ಮಾನ ವೇಗಿಗಳಿಂದ ಹೋಯ್ತು!
ಕ್ರಿಕೆಟ್ ಶಿಶುಗಳು ಟೀಂ ಇಂಡಿಯಾದ ವೇಗಿಗಳನ್ನು ಚೆನ್ನಾಗಿ ದಂಡಿಸಿದರೆ ಅನುಭವಿ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಜೋಡಿಯ ದಾಳಿ ಮುಂದೆ ನಿರುತ್ತರರಾದರು. ಅದರಲ್ಲೂ ಶಮಿ ಅತ್ಯಂತ ದುಬಾರಿಯೆನಿಸಿದರು. 4 ಓವರ್ ಗಳ ಕೋಟಾದಲ್ಲಿ ವಿಕೆಟ್ ಇಲ್ಲದೇ ರನ್ ಬಿಟ್ಟುಕೊಟ್ಟರು. ಬುಮ್ರಾ 2 ವಿಕೆಟ್ ಕಬಳಿಸಿದರು. ಅಶ್ವಿನ್, ಜಡೇಜಾ ತಲಾ 3 ವಿಕೆಟ್ ಪಡೆದರು.
ಇದರಿಂದಾಗಿ ನಮೀಬಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.