ಸೂರ್ಯಕುಮಾರ್ ಯಾದವ್ ಗೆ ಸ್ಥಾನ ಬಿಟ್ಟುಕೊಡ್ತಾರಾ ವಿರಾಟ್ ಕೊಹ್ಲಿ?

ಸೋಮವಾರ, 22 ನವೆಂಬರ್ 2021 (08:54 IST)
ಮುಂಬೈ: ಟೀಂ ಇಂಡಿಯಾ ಯುವ ಸೆನ್ಸೇಷನ್ ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕದಲ್ಲಿ ಕ್ಲಿಕ್ ಆಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವರು ಈ ಕ್ರಮಾಂಕಕ್ಕೆ ಸೂಕ್ತ ಎನ್ನುವುದನ್ನು ಮತ್ತೆ ಪ್ರೂವ್ ಮಾಡಿದ್ದಾರೆ. ಇದಕ್ಕೂ ಮೊದಲೂ ಕೊಹ್ಲಿ ನಾಯಕತ್ವದಲ್ಲೂ ಸೂರ್ಯ ಮೂರನೇ ಕ್ರಮಾಂಕದಲ್ಲಿ ಆಡಿದ್ದಾಗ ಉತ್ತಮ ಬ್ಯಾಟಿಂಗ್ ನಡೆಸಿದ್ದರು.

ಟೀಂ ಇಂಡಿಯಾದಲ್ಲಿ ಈಗಾಗಲೇ ಕೊಹ್ಲಿ ಈ ಸ್ಥಾನದ ಖಾಯಂ ಆಟಗಾರ. ಇದೀಗ ಕೊಹ್ಲಿ ಹಿಂತಿರುಗಿದಾಗ ಸೂರ್ಯ ಸ್ಥಾನ ಬದಲಾದರೂ ಅಚ್ಚರಿಯಿಲ್ಲ. ಆದರೆ ತಂಡದ ಹಿತದೃಷ್ಟಿಯಿಂದ ಕೊಹ್ಲಿ ತಮ್ಮ ಸ್ಥಾನ ಬಿಟ್ಟುಕೊಡಬೇಕು ಎನ್ನುವುದು ಮಾಜಿ ಕ್ರಿಕೆಟಿಗರ ಅಭಿಪ್ರಾಯ. ಹೀಗಾಗಿ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕ ಈಗ ಅನಿಶ್ಚಿತತೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ