ಮುಂಬೈ: ಟೀಂ ಇಂಡಿಯಾದಲ್ಲಿ ರಾಹುಲ್ ದ್ರಾವಿಡ್ ರಿಂದ ತೆರವಾಗಲಿರುವ ಮುಖ್ಯ ಕೋಚ್ ಹುದ್ದೆಗೆ ಗೌತಮ್ ಗಂಭೀರ್ ಆಯ್ಕೆಯಾಗಲಿದ್ದಾರೆ. ಆದರೆ ಅವರು ಕೋಚ್ ಆದರೆ ತಂಡದಲ್ಲಿ ಒಡಕು ಖಚಿತ ಅಂತಿದ್ದಾರೆ ಫ್ಯಾನ್ಸ್.
ಗೌತಮ್ ಗಂಭೀರ್ ಐಪಿಎಲ್ ನಲ್ಲಿ ಮೆಂಟರ್ ಆಗಿ ಯಶಸ್ಸು ಸಾಧಿಸಿದ ಬೆನ್ನಲ್ಲೇ ಸ್ವತಃ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ನೇಮಕಗೊಳ್ಳಲು ಆಸಕ್ತಿ ತೋರಿದ್ದರು. ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಆ ಪೈಕಿ ಯಾರೂ ಪ್ರಮುಖರು ಅರ್ಜಿ ಸಲ್ಲಿಸಿಲ್ಲ.
ಇದರ ನಡುವೆ ಗಂಭೀರ್ ಹೆಸರು ಪ್ರಬಲವಾಗಿ ಕೇಳಿಬಂದಿತ್ತು. ಆದರೆ ಗಂಭೀರ್ ಕೋಚ್ ಆದರೆ ತಂಡದಲ್ಲಿ ಒಮ್ಮತವಿರಲ್ಲ. ಆಟಗಾರರ ನಡುವೆ ಬಿರುಕುಂಟಾಗಬಹುದು ಎಂದು ಕೆಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣವನ್ನೂ ನೀಡುತ್ತಿದ್ದಾರೆ.
ಗಂಭೀರ್ ಗೆ ಈಗ ಟೀಂ ಇಂಡಿಯಾದಲ್ಲಿರುವ ವಿರಾಟ್ ಕೊಹ್ಲಿಯಂತಹ ಆಟಗಾರರ ಜೊತೆ ಭಿನ್ನಾಭಿಪ್ರಾಯವಿದೆ. ಜೊತೆಗೆ ಅವರು ಕೊಂಚ ಈಗೋ ಇರುವ ಮನುಷ್ಯ. ಕೋಪಿಷ್ಠ, ಜೊತೆಗೆ ಜಗಳಗಂಟ ಎಂಬ ಹಣೆಪಟ್ಟಿಯಿದೆ. ಹೀಗಿರುವ ವ್ಯಕ್ತಿ ಟೀಂ ಇಂಡಿಯಾದ ಕೋಚ್ ಆದರೆ ಕೆಲವೇ ದಿನಗಳಲ್ಲಿ ತಂಡದಲ್ಲಿ ಒಡಕುಂಟಾಗುವುದು ಖಚಿತ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.