ಟೀಂ ಇಂಡಿಯಾ ಕೈಲಾಗದ್ದನ್ನು ಸುಲಭವಾಗಿ ಮಾಡಿ ತೋರಿಸಿದ ನ್ಯೂಜಿಲೆಂಡ್
ಆದರೆ ನ್ಯೂಜಿಲೆಂಡ್ ತಂಡಕ್ಕೆ ಈ ಮೊತ್ತ ಬೆನ್ನತ್ತಲು ಸ್ವಲ್ಪವೂ ಕಷ್ಟವಾಗಲಿಲ್ಲ. ನಿರಾಯಾಸವಾಗಿ ಕಿವೀಸ್ ಬ್ಯಾಟ್ಸ್ ಮನ್ ಗಳು ರನ್ ಗಳಿಸಿದ್ದು, ಕೇವಲ 30.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿದ್ದಾರೆ. ಈ ಎರಡೂ ವಿಕೆಟ್ ಗಳೂ ಭುವನೇಶ್ವರ್ ಕುಮಾರ್ ಪಾಲಾಯಿತು. ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾಗೆ ಕ್ಲೀನ್ ಸ್ವೀಪ್ ಮಾಡುವ ಅವಕಾಶವಿತ್ತು. ಆದರೆ ಭಾರತೀಯ ಬ್ಯಾಟ್ಸ್ ಮನ್ ಗಳು ಇದನ್ನು ಹಾಳುಗೆಡವಿದ್ದಾರೆ.