ಹಿಂದೆಂದೂ ಕಾಣದ ಹೀನಾಯ ಪ್ರದರ್ಶನ ತೋರಿದ ಟೀಂ ಇಂಡಿಯಾ

ಗುರುವಾರ, 31 ಜನವರಿ 2019 (10:23 IST)
ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ಕೇವಲ 92 ರನ್ ಗಳಿಗೆ ಆಲೌಟ್ ಆಗಿದೆ.


ಗೆಲುವಿನ ಗುರಿ ಬೆನ್ನತ್ತಿರುವ ನ್ಯೂಜಿಲೆಂಡ್ ಇತ್ತೀಚೆಗಿನ ವರದಿ ಬಂದಾಗ ಕೇವಲ 2 ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದೆ.ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ದಾಳಿಗೆ ಕುಸಿದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಒಬ್ಬರಾದ ಮೇಲೊಬ್ಬರಂತೆ ಪೆವಿಲಿಯನ್ ಪೆರೇಡ್ ನಡೆಸಿ ಹೀನಾಯ ಸ್ಥಿತಿಗೆ ತಲುಪಿದರು.

ಯಾರೊಬ್ಬರೂ 20 ರನ್ ಗಡಿ ದಾಟಲಿಲ್ಲ. ಬೌಲರ್ ಯಜುವೇಂದ್ರ ಚಾಹಲ್ 18 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್! ಈ ಮೂಲಕ ಭಾರತ ಅಗ್ರ 6 ಬ್ಯಾಟ್ಸ್ ಮನ್ ಗಳು ಕನಿಷ್ಠ ಸ್ಕೋರ್ ಗಳಿಸಿದ ಕುಖ್ಯಾತಿಗೂ ಪಾತ್ರರಾದರು. ಭಾರತ ಈ ಪಂದ್ಯದಲ್ಲೂ ಧೋನಿ ಇಲ್ಲದೇ ಕಣಕ್ಕಿಳಿದಿದೆ. ಅವರ ಸ್ಥಾನಕ್ಕೆ ಬಂದ ದಿನೇಶ್ ಕಾರ್ತಿಕ್ ಶೂನ್ಯ ಗಳಿಸಿದರೆ, ಅಂಬಟಿ ರಾಯುಡು ಕೂಡಾ ಶೂನ್ಯ ಸಂಪಾದಿಸಿದರು. ಶಿಖರ್ ಧವನ್ 13, ನಾಯಕ ರೋಹಿತ್ ಶರ್ಮಾ ಕೇವಲ 7 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬೌಲ್ಟ್ 5 ವಿಕೆಟ್ ಗಳಿಸಿದರೆ, ಕಾಲಿನ್ ಡಿ ಗ್ರಾಂಡ್ ಹೋಮ್ 3 ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ