ಏಕದಿನ ವಿಶ್ವಕಪ್: ಕೊಹ್ಲಿ ತವರಲ್ಲಿ ನವೀನ್ ಉಲ್ ಹಕ್ ಗತಿಯೇನು?!

ಬುಧವಾರ, 11 ಅಕ್ಟೋಬರ್ 2023 (08:50 IST)
ನವದೆಹಲಿ: ಐಪಿಎಲ್ ನಲ್ಲಿ ಕೊಹ್ಲಿ ಜೊತೆ ಘರ್ಷಣೆ ಮಾಡಿಕೊಂಡ ಬಳಿಕ ಅಫ್ಘಾನಿಸ್ತಾನ ಕ್ರಿಕೆಟಿಗ ನವೀನ್ ಉಲ್ ಹಕ್ ಎಲ್ಲೇ ಹೋದರೂ ಕೊಹ್ಲಿ ಫ್ಯಾನ್ಸ್ ಕಿಚಾಯಿಸುತ್ತಲೇ ಇರುತ್ತಾರೆ.

 ಇಂದು ಕೊಹ್ಲಿ ತವರು ದೆಹಲಿಯ ಮೈದಾನದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದೆ. ಕಳೆದ ಪಂದ್ಯದಲ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ನವೀನ್ ಉಲ್ ಹಕ್ ರನ್ನು ಕೊಹ್ಲಿ ಫ್ಯಾನ್ಸ್ ಕಿಚಾಯಿಸಿದ್ದರು.

ಇಂದು ಕೊಹ್ಲಿ ತವರಿನಲ್ಲಿಯೇ ಪಂದ್ಯ ನಡೆಯುತ್ತಿದ್ದು, ನವೀನ್ ಮತ್ತೆ ಕೊಹ್ಲಿ ಅಭಿಮಾನಿಗಳನ್ನು ಎದುರಿಸಬೇಕಾಗುತ್ತದೆ. ಐಪಿಎಲ್ ನಲ್ಲಿ ಘರ್ಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಎರಡೂ ಆಟಗಾರರು ಮುಖಾಮುಖಿಯಾಗುತ್ತಿರುವುದರಿಂದ ಈ ಪಂದ್ಯಕ್ಕೆ ವಿಶೇಷ ಕಳೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ