ಹೈದರಾಬಾದ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಿಂದೊಮ್ಮೆ ಕೆಎಲ್ ರಾಹುಲ್ ಅವರನ್ನು ಟೀಕಿಸುವ ಪೋಸ್ಟ್ ಗೆ ಲೈಕ್ ಮಾಡಿದ್ದ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 28 ರನ್ ಗಳ ಸೋಲು ಅನುಭವಿಸಿದ ಬಳಿಕ ಅಭಿಮಾನಿಗಳು ನಾಯಕ ರೋಹಿತ್ ಶರ್ಮಾ ಮೇಲೆ ಸಹಜವಾಗಿಯೇ ಸಿಟ್ಟಾಗಿದ್ದಾರೆ. ತಂಡದ ಆಯ್ಕೆ ಬಗ್ಗೆ, ರೋಹಿತ್ ಆಟದ ಬಗ್ಗೆ ವಿಮರ್ಶೆ ಮಾಡುತ್ತಿದ್ದಾರೆ.
ಈ ನಡುವೆ ಈ ಹಿಂದೊಮ್ಮೆ ಟೆಸ್ಟ್ ಕ್ರಿಕೆಟ್ ನಲ್ಲಿ ಕೆಎಲ್ ರಾಹುಲ್ ಗಿಂತ ರೋಹಿತ್ ಶರ್ಮಾ ಸರಾಸರಿ ಚೆನ್ನಾಗಿದೆ. ಹಾಗಿದ್ದರೂ ಅವರನ್ನು ತಂಡದಿಂದ ಹೊರಗಿಡಲಾಗುತ್ತಿದೆ. ಕೆಎಲ್ ರಾಹುಲ್ ಮೋಸ್ಟ್ ಓವರ್ ರೇಟೆಡ್ ಬ್ಯಾಟ್ಸ್ ಮನ್ ಎಂದು ಬರೆದಿದ್ದ ಪೋಸ್ಟ್ ಗೆ ರೋಹಿತ್ ಲೈಕ್ ಕೊಟ್ಟಿದ್ದರು.
ಆ ಫೋಟೋವನ್ನು ಈಗ ನೆಟ್ಟಿಗರು ವೈರಲ್ ಮಾಡಿದ್ದಾರೆ. ಹಿಂದೊಮ್ಮೆ ತಮ್ಮದೇ ತಂಡದ ಸಹ ಆಟಗಾರನನ್ನು ಟೀಕಿಸುವ ಪೋಸ್ಟ್ ಗೆ ಲೈಕ್ ಮಾಡಿದ್ದ ರೋಹಿತ್ ಶರ್ಮಾ ಎಂದು ಟೀಕಿಸಿದ್ದಾರೆ.
ಆದರೆ ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಕೆಎಲ್ ರಾಹುಲ್ ಅದೆಷ್ಟೋ ಸ್ಮರಣೀಯ ಇನಿಂಗ್ಸ್ ಆಡಿ ತಂಡವನ್ನು ಕಾಪಾಡಿದ್ದಾರೆ. ಕಳೆದ ವಿಶ್ವಕಪ್ ಸಂದರ್ಭದಲ್ಲಿ ಪಂದ್ಯ ಗೆಲ್ಲಿಸಿದ ರಾಹುಲ್ ರನ್ನು ಸ್ವತಃ ರೋಹಿತ್ ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ್ದರು.