ಏಷ್ಯಾ ಕಪ್ ಬಹಿಷ್ಕರಿಸ್ತೀವಿ ಎಂದ ಪಾಕ್: ಆಡದಿದ್ರೆ ಏನೂ ನಷ್ಟವಿಲ್ಲ ಎಂದು ನೆಟ್ಟಿಗರು
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಳಿಕ ಟೀಂ ಇಂಡಿಯಾ ಆಟಗಾರರು ಎದುರಾಳಿಗಳು ಕಾಯುತ್ತಿದ್ದರೂ ಕೈ ಕುಲುಕದೇ ಪೆವಿಲಿಯನ್ ಗೆ ತೆರಳಿದ್ದರು. ಈ ವಿಚಾರ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪಾಕಿಸ್ತಾನ ಐಸಿಸಿಗೂ ದೂರು ಸಲ್ಲಿಸಿದೆ.
ಆದರೆ ನಿಯಮದಲ್ಲಿ ಶೇಕ್ ಹ್ಯಾಂಡ್ ಮಾಡುವ ನಿಯಮವಿಲ್ಲ. ಹೀಗಾಗಿ ಇದರಿಂದ ಭಾರತಕ್ಕೆ ಹೆಚ್ಚಿನ ಪರಿಣಾಮವಾಗದು. ಆದರೆ ಭಾರತದಿಂದ ಅವಮಾನಿತರಾಗಿರುವ ಪಾಕಿಸ್ತಾನ ತಂಡ ನಾವು ಏಷ್ಯಾ ಕಪ್ ಆಡಲ್ಲ ಎಂದು ಬೆದರಿಕೆ ಹಾಕುತ್ತಿದೆ.
ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಆಡದಿದ್ದರೆ ಕತ್ತೆ ಬಾಲ ಕುದುರೆ ಜುಟ್ಟು ಎಂದಿದ್ದಾರೆ. ನೀವು ಆಡದೇ ಇದ್ದರೆ ಭಾರತಕ್ಕೆ ಏನೂ ನಷ್ಟವಾಗಲ್ಲ. ಹೇಗಿದ್ದರೂ ಕಪ್ ಗೆಲ್ಲೋದು ನಾವೇ. ನೀವು ಭಯೋತ್ಪಾದಕರನ್ನು ಸೃಷ್ಟಿಸುವ ದೇಶದವರು. ನಿಮಗೆ ಬೆದರಿಕೆ ಹಾಕುವುದೇ ಕೆಲಸ ಎಂದು ಕಾಲೆಳೆದಿದ್ದಾರೆ.