ದುಬೈ: 2021 ರ ಟಿ20 ವಿಶ್ವಕಪ್ ಭಾರತದಲ್ಲಿ ಆಯೋಜಿಸುತ್ತಿರುವುದರ ಬಗ್ಗೆ ಪಾಕಿಸ್ತಾನ ತಗಾದೆ ತೆಗೆದಿದೆ. ಕೂಟವನ್ನು ಭಾರತವೇ ಆಯೋಜಿಸಲಿ ಆದರೆ ಬೇರೆ ದೇಶದಲ್ಲಿ ನಡೆಸಲಿ ಎಂದು ತಕಾರಾರು ತೆಗೆದಿದೆ.
ಭಾರತದಲ್ಲಿ ಕೊರೋನಾ ಪ್ರಕರಣ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲಿನ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ 2021 ರ ವಿಶ್ವಕಪ್ ಆಯೋಜಿಸುವುದು ಆ ದೇಶದಲ್ಲಿ ಸುರಕ್ಷಿತವಲ್ಲ. ಯುಎಇಗೆ ಕೂಟ ಸ್ಥಳಾಂತರವಾಗಲಿ ಎಂದು ಪಾಕ್ ಕ್ರಿಕೆಟ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸಿಂ ಖಾನ್ ಹೇಳಿದ್ದಾರೆ.