ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಎಡವುತ್ತಿರುವುದೆಲ್ಲಿ?

ಮಂಗಳವಾರ, 1 ಡಿಸೆಂಬರ್ 2020 (09:20 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಸತತ ಸೋಲುಂಡಿರುವ ಟೀಂ ಇಂಡಿಯಾಗೆ ಪ್ರಮುಖವಾಗಿ ಕಾಡುತ್ತಿರುವುದು ಬೌಲರ್ ಗಳ ಫಾರ್ಮ್ ಸಮಸ್ಯೆ.


ಎರಡೂ ಪಂದ್ಯಗಳಲ್ಲಿ ಎದುರಾಳಿಗಳು ಬೃಹತ್ ಮೊತ್ತ ಪೇರಿಸಿದ್ದು, ಬಳಿಕ ಬ್ಯಾಟ್ಸ್ ಮನ್ ಗಳು ಶಕ್ತಿಮೀರಿ ಪ್ರಯತ್ನಿಸಿದರೂ ಆ ದೊಡ್ಡ ಮೊತ್ತವನ್ನು ದಾಟಲಾಗದೇ ಸೋಲನುಭವಿಸಿದ್ದಾರೆ. ಸಾಮಾನ್ಯವಾಗಿ ಭಾರತಕ್ಕೆ ಏಕದಿನ ಪಂದ್ಯಗಳಲ್ಲಿ ಮಧ್ಯಮ ಓವರ್ ಗಳಲ್ಲಿ ಸ್ಪಿನ್ನರ್ ಗಳೇ ಶಕ್ತಿ. ಒಂದು ವೇಳೆ ವೇಗಿಗಳು ರನ್ ನಿಯಂತ್ರಿಸಲು, ವಿಕೆಟ್ ಕೀಳಲು ವಿಫಲರಾದರೆ ಮಧ್ಯಮ ಓವರ್ ಗಳಲ್ಲಿ ಸ್ಪಿನ್ನರ್ ಗಳು ದಾಳಿಗಿಳಿದು ರನ್ ನಿಯಂತ್ರಿಸುವ ಕೆಲಸ ಮಾಡುತ್ತಾರೆ. ಆದರೆ ಮಧ್ಯಮ ಓವರ್ ಗಳಲ್ಲಿ ಈ ಕೆಲಸ ನಡೆಯದೇ ಆಸ್ಟ್ರೇಲಿಯಾ ಎರಡೂ ಪಂದ್ಯಗಳಲ್ಲಿ ಬೇಕಾಬಿಟ್ಟಿ ರನ್ ಗಳಿಸಿದೆ. ಜತೆಗೆ ಬೃಹತ್ ಮೊತ್ತ ಪೇರಿಸುವಾಗ ರೋಹಿತ್ ರನ್ನು ಹಿಟ್ ಮ್ಯಾನ್ ಗಳ ಕೊರತೆ ಭಾರತ ತಂಡದಲ್ಲಿ ಎದ್ದು ಕಾಣುತ್ತಿದೆ. ಇದೆಲ್ಲವನ್ನೂ ಸರಿಪಡಿಸದೇ ಇದ್ದರೆ ಮುಂದಿನ ಪಂದ್ಯಗಳಲ್ಲೂ ಭಾರತದ ಕತೆ ಇದೇ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ