ಪಿತೃತ್ವ ರಜೆಯನ್ನು ಬಿಸಿಸಿಐ ನಿರಾಕರಿಸಿದ್ದಲ್ಲ, ನಾನೇ ಕೇಳಿರಲಿಲ್ಲ: ಸ್ಪಷ್ಟನೆ ನೀಡಿದ ಸುನಿಲ್ ಗವಾಸ್ಕರ್

ಮಂಗಳವಾರ, 1 ಡಿಸೆಂಬರ್ 2020 (09:48 IST)
ಮುಂಬೈ: ವಿರಾಟ್ ಕೊಹ್ಲಿಗೆ ಬಿಸಿಸಿಐ ಪಿತೃತ್ವ ರಜೆ ಮಂಜೂರು ಮಾಡಿದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಗೆ ಅಂದು ಪಿತೃತ್ವ ರಜೆ ಬಿಸಿಸಿಐ ಕೊಟ್ಟಿರಲಿಲ್ಲ ಎಂಬ ವಿಚಾರ ಹರಿದಾಡಿತ್ತು. ಆದರೆ ಅದಕ್ಕೀಗ ಸ್ವತಃ ಗವಾಸ್ಕರ್ ಸ್ಪಷ್ಟನೆ ನೀಡಿದ್ದಾರೆ.


ಗವಾಸ್ಕರ್ ಗೆ ಅಂದು ಬಿಸಿಸಿಐ ರಜೆ ಮಂಜೂರು ಮಾಡಿರಲಿಲ್ಲ. ಹೀಗಾಗಿ ಅವರು ತಮ್ಮ ಮಗನ ಮುಖವನ್ನೂ ನೋಡಲಾಗದೇ ಬೇಸರಗೊಂಡಿದ್ದರು ಎಂದೆಲ್ಲಾ ವರದಿಯಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಗವಾಸ್ಕರ್ ಗೆ ‘ನಾನೇ ಪಿತೃತ್ವ ರಜೆಗೆ ಮನವಿ ಮಾಡಿರಲಿಲ್ಲ. ನಾನು ದೇಶಕ್ಕಾಗಿ ಆಡಲು ಬದ್ಧನಾಗಿದ್ದೆ. ನನ್ನ ಪತ್ನಿಯೂ ನನಗೆ ಬೆಂಬಲ ನೀಡಿದ್ದಳು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ