ಇದಕ್ಕೂ ಮೊದಲು ಹಲವು ಬಾರಿ ಗಂಭೀರ್ ಕೊಹ್ಲಿ ನಾಯಕತ್ವದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ಮತ್ತೆ ಕೊಹ್ಲಿ ಯಾವ ರೀತಿಯ ಕ್ಯಾಪ್ಟನ್ ಎಂದೇ ತಿಳಿಯುತ್ತಿಲ್ಲ. ಇದ್ಯಾವ ಪರಿಯ ನಾಯಕತ್ವ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಪ್ರಮುಖ ಬೌಲರ್ ಗಳಿಗೆ ಸೀಮಿತ ಓವರ್ ಗಳಲ್ಲಿ ಸಾಮಾನ್ಯವಾಗಿ ನಾಲ್ಕು ಓವರ್ ಗಳ ಸ್ಪೆಲ್ ನೀಡಲಾಗುತ್ತದೆ. ಆದರೆ ಇಲ್ಲಿ 2 ಓವರ್ ಗಳಿಗೆ ಸೀಮಿತಗೊಳಿಸಲಾಗಿದೆ. ಇಂತಹಾ ಬ್ಯಾಟಿಂಗ್ ಎದುರು ಪ್ರಮುಖ ಬೌಲರ್ ಗಳಿಗೆ ನಾಲ್ಕು ಓವರ್ ಕೂಡಾ ನೀಡದೇ ಇದ್ದ ಮೇಲೆ ಇದೆಂಥಾ ನಾಯಕತ್ವದ ಲೆಕ್ಕಾಚಾರ. ಇದು ಟಿ20 ಕ್ರಿಕೆಟ್ ಅಲ್ಲ. ಇದು ತೀರಾ ಕಳಪೆ ನಾಯಕತ್ವ ಎಂದು ಗಂಭೀರ್ ಕಿಡಿ ಕಾರಿದ್ದಾರೆ.