ಟೀಂ ಇಂಡಿಯಾದಲ್ಲಿ ಗಾಯಾಳಾದರೆ ಕತೆ ಮುಗೀತು! ಬಿಸಿಸಿಐನಲ್ಲಿ ಎಲ್ಲವೂ ಕನ್ ಫ್ಯೂಷನ್
ಮಂಗಳವಾರ, 1 ಡಿಸೆಂಬರ್ 2020 (09:07 IST)
ಮುಂಬೈ: ಟೀಂ ಇಂಡಿಯಾದಲ್ಲಿ ಇತ್ತೀಚೆಗೆ ಯಾರಾದರೂ ಆಟಗಾರರು ಗಾಯಾಳುವಾದರೆ ಕತೆ ಮುಗೀತು. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದು ಕರೆಯಿಸಿಕೊಳ್ಳುವ ಬಿಸಿಸಿಐ ಗಾಯಾಳು ಆಟಗಾರರನ್ನು ಸರಿಯಾಗಿ ನಿಭಾಯಿಸುವುದರಲ್ಲಿ ಸೋತಿದೆ.
ಇದಕ್ಕೆ ತಾಜಾ ಉದಾಹರಣೆ ರೋಹಿತ್ ಶರ್ಮಾ. ರೋಹಿತ್ ಗೆ ಗಾಯಾಳುವಾಗಿದ್ದಾರೆ ಎಂದು ಬಿಸಿಸಿಐ ಹೇಳಿಕೆ ನೀಡುತ್ತಿದ್ದರೆ, ಇನ್ನೊಂದೆಡೆ ರೋಹಿತ್ ಐಪಿಎಲ್ ಆಡಿದ್ದರು. ಇದೀಗ ರೋಹಿತ್ ಗಾಯದ ಸ್ಥಿತಿ ಏನಾಗಿದೆ ಎಂಬುದು ತಂಡದ ನಾಯಕನಿಗೇ ಮಾಹಿತಿಯಿಲ್ಲ! ಇಶಾಂತ್ ಶರ್ಮಾ ಕತೆಯೂ ಹೀಗೆ.
ಈ ರೀತಿ ಆಗುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಭುವನೇಶ್ವರ್ ಕುಮಾರ್ ಯಾದವ್ ಗೆ ಗಾಯವಾಗಿದ್ದಾಗಲೂ ಇದೇ ರೀತಿ ಆಗಿತ್ತು. ಒಮ್ಮೆ ಫಿಟ್ ಎಂದು ತಂಡಕ್ಕೆ ಮರಳಿದರೂ ಮತ್ತೆ ಎರಡೇ ಪಂದ್ಯವಾಗುವಷ್ಟರಲ್ಲಿ ಮತ್ತೆ ಗಾಯವಾಗಿ ಮೂಲೆ ಸೇರಿದ್ದರು. ಇದು ಎನ್ ಸಿಎ ವೈಫಲ್ಯವೋ, ಬಿಸಿಸಿಐ ಉಪೇಕ್ಷೆಯೋ.. ಒಟ್ನಲ್ಲಿ ಇದರಿಂದ ನಷ್ಟವಾಗುತ್ತಿರುವುದು ಮಾತ್ರ ಆಟಗಾರರಿಗೆ, ತಂಡಕ್ಕೆ.