ಹೈದರಾಬಾದ್ ಮೈದಾನ ಸಿಬ್ಬಂದಿಗಳಿಗೆ ಪಾಕ್ ಕ್ರಿಕೆಟಿಗರ ಉಡುಗೊರೆ

ಬುಧವಾರ, 11 ಅಕ್ಟೋಬರ್ 2023 (09:58 IST)
Photo Courtesy: Twitter
ಹೈದರಾಬಾದ್: ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡ ಹೈದರಾಬಾದ್ ಮೈದಾನ ಸಿಬ್ಬಂದಿಗಳಿಗೆ ಉಡುಗೊರೆ ನೀಡಿದ್ದಾರೆ.

ಪಾಕ್ ಕ್ರಿಕೆಟ್ ತಂಡ ಭಾರತಕ್ಕೆ ಕಾಲಿಟ್ಟಾಗಿನಿಂದ ಇದುವರೆಗೆ ಏಕದಿನ ವಿಶ್ವಕಪ್ ನಲ್ಲಿ ನಾಲ್ಕು ಪಂದ್ಯಗಳನ್ನು ಇದೇ ಮೈದಾನದಲ್ಲಿ ಆಡಿದೆ. ಹೀಗಾಗಿ ಈ ಮೈದಾನದ ಜೊತೆಗೆ ಪಾಕ್ ತಂಡಕ್ಕೆ ವಿಶೇಷ ಬಂಧವಿದೆ.

ಇದೇ ಕಾರಣಕ್ಕೆ ನಿನ್ನೆಯ ಪಂದ್ಯ ಮುಕ್ತಾಯದ ಬಳಿಕ ಪಾಕ್ ನಾಯಕ ಬಾಬರ್ ಅಜಮ್ ಸಿಬ್ಬಂದಿಗಳಿಗೆ ತಂಡದ ಜೆರ್ಸಿ ಉಡುಗೊರೆಯಾಗಿ ಕೊಟ್ಟಿದ್ದಾರೆ. ಬಳಿಕ ಪಾಕ್ ತಂಡದ ಕ್ರಿಕೆಟಿಗರು ಮೈದಾನ ಸಿಬ್ಬಂದಿಗಳ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ