ಪಾಕ್ ಸ್ಟಾರ್ ವೇಗಿಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಮೊದಲು ಪಾಕ್ ಗೆ ಹೊಸ ತಲೆನೋವು
ಪಾಕ್ ತಂಡದ ಪ್ರಮುಖ ವೇಗಿ ಶಾಹಿನ್ ಅಫ್ರಿದಿ ನಿನ್ನೆ ನಡೆದಿದ್ದ ನೇಪಾಳ ವಿರುದ್ಧದ ಪಂದ್ಯದಲ್ಲಿ ಐದು ಓವರ್ ಗಳ ಬೌಲಿಂಗ್ ನಡೆಸಿ 2 ವಿಕೆಟ್ ಕೂಡಾ ಕಬಳಿಸಿದ್ದರು. ಆದರೆ ಬಳಿಕ ಕಾಲು ನೋವಿಗೆ ತುತ್ತಾಗಿದ್ದು ತಕ್ಷಣವೇ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.
ಭಾರತದ ವಿರುದ್ಧದ ಪಂದ್ಯಕ್ಕೆ ಮುನ್ನ ವಿಶ್ರಾಂತಿ ಪಡೆದು ಮತ್ತೆ ಕಣಕ್ಕೆ ಮರಳುವ ವಿಶ್ವಾಸವಿದೆಯಾದರೂ ಪದೇ ಪದೇ ಅವರು ಗಾಯದ ಸಮಸ್ಯೆಗೀಡಾಗುತ್ತಿರುವುದು ತಂಡಕ್ಕೆ ದೊಡ್ಡ ತಲೆನೋವಾಗಿದೆ.