ಭಾರತ-ಪಾಕಿಸ್ತಾನಕ್ಕೆ ಮಳೆ ಭೀತಿ? ಹೇಗಿದೆ ಹವಾಮಾನ ಮುನ್ಸೂಚನೆ?

ಗುರುವಾರ, 31 ಆಗಸ್ಟ್ 2023 (08:30 IST)
Photo Courtesy: Twitter
ಪಲ್ಲಿಕೆಲೆ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಎಲ್ಲರ ಕಣ್ಣು ಸೆಪ್ಟೆಂಬರ್ 2 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಮೇಲೆಯೇ ಇದೆ. ಆದರೆ ಈ ಪಂದ್ಯಕ್ಕೆ ಹವಾಮಾನ ವರದಿ ಹೇಗಿದೆ?

ಶ್ರೀಲಂಕಾದ ಪಲ್ಲಿಕೆಲೆಯಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯಕ್ಕೆ ಸದ್ಯದ ಹವಾಮಾನ ವರದಿ ಪ್ರಕಾರ ಮಳೆ ಭೀತಿಯೂ ಇದೆ. ಈಗಿನ ಹವಾಮಾನ ಪ್ರಕಾರ ಆ ದಿನ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಈ ಪಂದ್ಯಕ್ಕೆ ಶೇ.90 ರಷ್ಟು ಮಳೆಯಾಗುವ ಸಾಧ‍್ಯತೆಯಿದೆ ಎಂದು ವರದಿ ಹೇಳುತ್ತಿದೆ. ಇದು ಈ ಪಂದ್ಯಕ್ಕಾಗಿಯೇ ಕಾಯುತ್ತಿರುವ ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಸೆ ತರಬಹುದು. ಆದರೆ ಹಾಗಾಗದಿರಲಿ, ಪೂರ್ಣ ಪಂದ್ಯ ನಡೆಯಲಿ ಎಂಬುದೇ ಅಭಿಮಾನಿಗಳ ಪ್ರಾರ್ಥನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ