ಏಷ್ಯಾ ಕಪ್: ಟೀಂ ಇಂಡಿಯಾ ವಿರುದ್ಧ ಶಪಥ ಮಾಡಿದ ಬೌಲರ್ ನನ್ನೇ ಹೊರಗಿಟ್ಟ ಪಾಕಿಸ್ತಾನ
ಪಾಕಿಸ್ತಾನ ಈ ಪಂದ್ಯಕ್ಕೆ ಒಂದು ಬದಲಾವಣೆ ಮಾಡಿದ್ದು, ಟೀಂ ಇಂಡಿಯಾದ ಐದು ವಿಕೆಟ್ ಪಡೆಯುವೆ ಎಂದು ಟೂರ್ನಿಯ ಆರಂಭದಲ್ಲಿ ಶಪಥ ಮಾಡಿದ್ದ ವೇಗಿ ಉಸ್ಮಾನ್ ಖಾನ್ ಹೊರಗಿಟ್ಟು, ಅವರ ಬದಲಿಗೆ ಮೊಹಮ್ಮದ್ ಅಮೀರ್ ಗೆ ಸ್ಥಾನ ನೀಡಿದೆ.
ಭಾರತ ಬಾಂಗ್ಲಾ ವಿರುದ್ಧ ಆಡಿದ ತಂಡವನ್ನೇ ಕಣಕ್ಕಿಳಿಸಿದೆ. ಲೀಗ್ ಹಂತದಲ್ಲಿ ಭಾರತ ಪಾಕ್ ಎದುರು ಗೆದ್ದಿತ್ತು. ಆದರೆ ಇಂದು ಯಾವ ತಂಡ ಗೆಲ್ಲುತ್ತದೋ ಅದುವೇ ಮುಂದಿನ ಹಂತಕ್ಕೆ ಏರಲಿದೆ.