IPL 2025 CSK vs DC: ಐಪಿಎಲ್‌ ವಿದಾಯದ ವದಂತಿ ಬೆನ್ನಲ್ಲೇ ಧೋನಿ ಆಟ ನೋಡಲು ಬಂದ ಪೋಷಕರು

Sampriya

ಶನಿವಾರ, 5 ಏಪ್ರಿಲ್ 2025 (18:43 IST)
Photo Courtesy X
ಚೆನ್ನೈ: ಎಂಎಸ್‌ ಧೋನಿಗೆ ಈ ಬಾರಿಯ ಐಪಿಎಲ್‌ ಕೊನೆಯ ಪಂದ್ಯವಾಗುತ್ತದೆ ಎಂಬ ವದಂತಿ ಜೋರಾಗಿ ಇರುವಾಗಲೇ ಅವರ ಫೋಷಕರು ಇದೀಗ ಇಂದಿನ ಪಂದ್ಯಾಟ ವೀಕ್ಷಣೆ ಮಾಡಲು ಬಂದಿರುವುದು ಮತ್ತಷ್ಟು ಊಹಾಪೋಹಗಳು ಜಾಸ್ತಿಯಾಗಿದೆ.

 ಐಪಿಎಲ್‌ 2025ರ ಇಂದಿನ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಯಾಗುತ್ತಿದೆ. ಚೆನ್ನೈನ  ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾಟವನ್ನು ವೀಕ್ಷಿಸಲು ಧೋನಿ ಅವರ ಫೋಷಕರು ಬಂದಿರುವುದು ಭಾರೀ ಕುತೂಹಲವನ್ನು ಮೂಡಿಸುತ್ತಿದೆ.

ಧೋನಿ ಅವರ ಫೋಷಕರು ಸಾಮಾನ್ಯವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆ. ಇದೀಗ ಧೋನಿಯ ಪೋಷಕರು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಾಗ ಮತ್ತಷ್ಟು ಊಹಾಪೋಹಗಳು ಜಾಸ್ತಿಯಾಗಿದೆ. ಇದು ಭಾರತದ ಮಾಜಿ ನಾಯಕನಿಗೆ ವಿದಾಯ ಹೇಳುತ್ತಿರಬಹುದೇ ಎಂದು ಅಭಿಮಾನಿಗಳು ಆಶ್ಚರ್ಯ ಪಡುವಂತೆ ಮಾಡಿತು.

ಸಿಎಸ್‌ಕೆ ಅಧಿಕೃತ ಖಾತೆಯು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಚಿತ್ರಗಳಲ್ಲಿ ಧೋನಿ ಅವರ ಪತ್ನಿ ಸಾಕ್ಷಿ ಮತ್ತು ಅವರ ಮಗಳು ಝಿವಾ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿರುವುದನ್ನು ಸಹ ತೋರಿಸಲಾಗಿದೆ.

ಧೋನಿ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ, ಸರಾಸರಿ 39.17 ರಂತೆ 5,289 ರನ್‌ಗಳು ಮತ್ತು 137 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದು, 24 ಅರ್ಧಶತಕಗಳು ಮತ್ತು ಅತ್ಯುತ್ತಮ ಸ್ಕೋರ್ 84.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ