ನಮ್ಮಿಂದಾಗಿ ಧೋನಿ ಫೇಮಸ್ಸಾದರು ಎಂದು ಪಾರ್ಥಿವ್ ಪಟೇಲ್ ಹೇಳಿದ್ದೇಕೆ?
ಶನಿವಾರ, 23 ಜೂನ್ 2018 (09:08 IST)
ಮುಂಬೈ: ಮಹೇಂದ್ರ ಸಿಂಗ್ ಧೋನಿ ಎಂಬ ಕ್ರಿಕೆಟಿಗ ಇಂದು ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ಸ್ಥಾನದಲ್ಲಿದ್ದಾರೆಂದರೆ ಅದಕ್ಕೆ ಕಾರಣ ನಮ್ಮಂತಹ ವಿಕೆಟ್ ಕೀಪರ್ ಗಳು ಎಂದು ಕ್ರಿಕೆಟಿಗ ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಪಾರ್ಥಿವ್ ಈ ಹೇಳಿಕೆ ಧೋನಿ ಅಭಿಮಾನಿಗಳಿಗೆ ಕೊಂಚ ಸಿಟ್ಟು ತರಿಸಬಹುದು. ಹಾಗಿದ್ದರೂ ಅದಕ್ಕೆ ಅವರು ತಕ್ಕ ಸಮರ್ಥನೆಯನ್ನೇ ಕೊಟ್ಟಿದ್ದಾರೆ. ದ್ರಾವಿಡ್ ಟೀಂ ಇಂಡಿಯಾ ನಾಯಕರಾಗಿದ್ದಾಗ ದಿನೇಶ್ ಕಾರ್ತಿಕ್ ಅಥವಾ ಪಾರ್ಥಿವ್ ಪಟೇಲ್ ಅವಕಾಶ ಪಡೆಯುತ್ತಿದ್ದರು.
ಆದರೆ ಇವರು ಯಾರೂ ಸ್ಥಿರ ಪ್ರದರ್ಶನ ನೀಡಲು ವಿಫಲರಾದರು. ಇದೇ ಸಂದರ್ಭದಲ್ಲಿ ತಂಡಕ್ಕೆ ಬಂದ ಧೋನಿ ವಿಕೆಟ್ ಕೀಪಿಂಗ್ ಜತೆಗೆ ಬ್ಯಾಟ್ಸ್ ಮನ್ ಆಗಿಯೂ ಕ್ಲಿಕ್ ಆದರು. ಹೀಗಾಗಿಯೇ ಅವರ ಸ್ಥಾನ ಗಟ್ಟಿಯಾಯಿತು.
ಒಂದು ವೇಳೆ ನಾವು ಆ ಸಂದರ್ಭದಲ್ಲಿ ಉತ್ತಮ ಪ್ರದರ್ಶನ ಕೊಡುತ್ತಿದ್ದರೆ, ಬಹುಶಃ ಧೋನಿಯನ್ನು ತಂಡಕ್ಕೆ ಆಯ್ಕೆಯೇ ಮಾಡುತ್ತಿರಲಿಲ್ಲವೇನೋ. ಹಾಗಾಗಿಯೇ ನಮ್ಮಂತಹ ಆಟಗಾರರು ಆವತ್ತು ಕಳಪೆ ಆಟ ಆಡಿದ್ದಕ್ಕೆ ಧೋನಿ ತಂಡದಲ್ಲಿ ಖಾಯಂ ಸ್ಥಾನ ಪಡೆದರು ಎಂದು ಪಾರ್ಥಿವ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅವರ ಮಾತಿನಲ್ಲಿ ಸತ್ಯವಿದೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.