ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ವೇಗಿ ಪ್ರಸಿದ್ಧ ಕೃಷ್ಣ

ಗುರುವಾರ, 8 ಜೂನ್ 2023 (17:35 IST)
Photo Courtesy: Twitter
ಬೆಂಗಳೂರು: ಕರ್ನಾಟಕ ಮೂಲದ ಟೀಂ ಇಂಡಿಯಾ ವೇಗಿ ಪ್ರಸಿದ್ಧ ಕೃಷ್ಣ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ತಮ್ಮ ಗೆಳತಿ ರಚನಾ ಕೃಷ್ಣ ಜೊತೆ ಇಂದು ಪ್ರಸಿದ್ಧ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಂಪ್ರದಾಯಿಕವಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕುಟುಂಬಸ್ಥರು, ಕ್ರಿಕೆಟ್ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು.

ಕ್ರಿಕೆಟಿಗರಾದ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಕೆ.ಗೌತಮ್ ಮತ್ತಿತರು ವಿವಾಹದಲ್ಲಿ ಭಾಗಿಯಾಗಿದ್ದಾರೆ. ಗಾಯದ ಕಾರಣದಿಂದ ಪ್ರಸಿದ್ಧ ಈ ಬಾರಿ ಐಪಿಎಲ್ ನಲ್ಲಿ ಆಡಿರಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ