ಪೃಥ್ವಿ ಶಾಗೆ ಮಿಸ್ಸಾದ ಛಾನ್ಸ್, ಕೆಎಲ್ ರಾಹುಲ್ ಪಾಲು

ಬುಧವಾರ, 12 ಡಿಸೆಂಬರ್ 2018 (11:47 IST)
ಪರ್ತ್: ಸದ್ಯಕ್ಕೆ ಫಾರ್ಮ್ ನಲ್ಲಿದ್ದರೂ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದೇ ಕಡಿಮೆ. ಹಾಗಿರುವಾಗ ಕೆಎಲ್ ರಾಹುಲ್ ಗೆ ಇದು ಅದೃಷ್ಟ ಅಂತಲೇ ಹೇಳಬೇಕು.


ಆಸ್ಟ್ರೇಲಿಯಾ ಸರಣಿ ಆರಂಭವಾಗುವ ಮೊದಲೇ ಪ್ರತಿಭಾವಂತ ಯುವ ಆರಂಭಿಕ ಪೃಥ್ವಿ ಶಾ ಗಾಯಗೊಂಡಿದ್ದು ಫಾರ್ಮ್ ನಲ್ಲಿಲ್ಲದ ಕೆಎಲ್ ಪಾಲಿಗೆ ಅದೃಷ್ಟವಾಗಿ ಪರಿಣಮಿಸಿತು.

ಇದೀಗ ಪೃಥ‍್ವಿ ಶಾ ನಡೆದಾಡಲು ಶುರು ಮಾಡಿದ್ದು, ಇನ್ನೂ ಬ್ಯಾಟಿಂಗ್ ಅಭ್ಯಾಸ ನಡೆಸುವಷ್ಟು ಫಿಟ್ ಆಗಿಲ್ಲ. ಹೀಗಾಗಿ ಪೃಥ್ವಿ ದ್ವಿತೀಯ ಟೆಸ್ಟ್ ನಿಂದಲೂ ಹೊರಗುಳಿಯಬೇಕಾಗಿದೆ. ಪೃಥ್ವಿಯ ದುರಾದೃಷ್ಟ ಇದೀಗ ಕೆಎಲ್ ಪಾಲಿಗೆ ಅದೃಷ್ಟವಾಗಿ ಪರಿಣಮಿಸಿದ್ದು, ಮೊದಲ ಟೆಸ್ಟ್ ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ಕೊಡದೇ ಇದ್ದರೂ ದ್ವಿತೀಯ ಟೆಸ್ಟ್ ನಲ್ಲೂ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ