ಬೆಂಗಳೂರಿನ ಅಜ್ಜಿ ಮನೆಗೆ ಭೇಟಿ ಕೊಟ್ಟ ಕ್ರಿಕೆಟಿಗ ರಚಿನ್ ರವೀಂದ್ರ: ಮೊಮ್ಮಗನ ದೃಷ್ಟಿ ತೆಗೆದ ಅಜ್ಜಿ

ಶುಕ್ರವಾರ, 10 ನವೆಂಬರ್ 2023 (16:02 IST)
ಬೆಂಗಳೂರು: ನ್ಯೂಜಿಲೆಂಡ್ ಪರ ವಿಶ್ವಕಪ್ ಪಂದ್ಯಾವಳಿ ಆಡಲು ಭಾರತಕ್ಕೆ ಬಂದಿರುವ ಬೆಂಗಳೂರು ಮೂಲದ ಕ್ರಿಕೆಟಿಗ ರಚಿನ್ ರವೀಂದ್ರ ಇದೀಗ ತಮ್ಮ ಅಜ್ಜಿ ಮನೆಗೆ ಭೇಟಿ ನೀಡಿದ್ದಾರೆ.

ರಚಿನ್ ಅಜ್ಜಿ ಮನೆ ಬೆಂಗಳೂರಲ್ಲಿದ್ದು, ಇಲ್ಲಿ ನಿನ್ನೆ ಶ್ರೀಲಂಕಾ ವಿರುದ್ಧದ ಪಂದ್ಯಕ್ಕಾಗಿ ರಚಿನ್ ಆಗಮಿಸಿದ್ದರು. ಪಂದ್ಯ ಮುಗಿದ ಬಳಿಕ ರಚಿನ್ ಅಜ್ಜಿ ಮನೆಗೆ ಭೇಟಿ ಕೊಟ್ಟಿದ್ದಾರೆ.

ಮನೆಗೆ ಬಂದ ಮೊಮ್ಮಗನ ದೃಷ್ಟಿ ನಿವಾಳಿಸಿ ಅಜ್ಜಿ ಸುಂದರ ಕ್ಷಣಗಳನ್ನು ಕಳೆದಿದ್ದಾರೆ. ತಾತ-ಅಜ್ಜಿ ಜೊತೆಗೆ ರಚಿನ್ ಕಾಲ ಕಳೆದಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ