ಪಾಕ್ ವಿರುದ್ಧ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಮೈದಾನದಲ್ಲೇ ದ್ರಾವಿಡ್ ಕ್ಲಾಸ್

ಭಾನುವಾರ, 28 ಆಗಸ್ಟ್ 2022 (19:10 IST)
ದುಬೈ: ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಪಂದ್ಯವಾಡುತ್ತಿರುವ ಟೀಂ ಇಂಡಿಯಾಗೆ ಕೋಚ್ ರಾಹುಲ್ ದ್ರಾವಿಡ್ ಕಮ್ ಬ್ಯಾಕ್ ಮಾಡಿರುವುದು ಹೊಸ ಶಕ್ತಿ ನೀಡಿದೆ.

ಕೊರೋನಾದಿಂದ ಚೇತರಿಸಿಕೊಂಡಿರುವ ದ್ರಾವಿಡ್ ನಿನ್ನೆ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಇದುವರೆಗೆ ಅವರಿಗೆ ಆಟಗಾರರ ಜೊತೆ ಅಭ್ಯಾಸದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ.

ಹೀಗಾಗಿ ಇಂದು ಟಾಸ್  ಗೆ ಮುನ್ನ ಎಲ್ಲಾ ಆಟಗಾರರನ್ನು ಒಟ್ಟುಗೂಡಿಸಿ ಮಹತ್ವದ ಸಲಹೆ ಸೂಚನೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ