ರೋಹಿತ್ ಶರ್ಮಾ ನಾಯಕರಾಗಲು ದ್ರಾವಿಡ್ ಬೆಂಬಲ

ಶುಕ್ರವಾರ, 5 ನವೆಂಬರ್ 2021 (08:49 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಆಯ್ಕೆಯಾಗುತ್ತಿದ್ದಂತೇ ರಾಹುಲ್ ದ್ರಾವಿಡ್ ಮಾಧ‍್ಯಮಗಳೊಂದಿಗೆ ಮಾತನಾಡಿದ್ದು, ಕಿರು ಮಾದರಿಗೆ ತಂಡದ ನಾಯಕತ್ವ ಯಾರು ವಹಿಸಬೇಕು ಎನ್ನುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಿರು ಮಾದರಿ ಕ್ರಿಕೆಟ್ ರೋಹಿತ್ ಶರ್ಮಾ ನಾಯಕರಾಗುವುದು ಸೂಕ್ತ ಎಂದು ದ್ರಾವಿಡ್ ಹೇಳಿದ್ದಾರೆ. ರೋಹಿತ್ ಮೊದಲ ಆಯ್ಕೆ. ಅವರ ಅನುಭವ ಟೀಂ ಇಂಡಿಯಾಕ್ಕೆ ಒಳಿತು ಮಾಡಲಿದೆ ಎಂದಿದ್ದಾರೆ.

ಅವರಲ್ಲದೇ ಹೋದರೆ ಎರಡನೇ ಆಯ್ಕೆಯಾಗಿ ಕೆಎಲ್ ರಾಹುಲ್ ಹೆಸರು ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನವಂಬರ್ 17 ರಿಂದ ಕ್ರಿಕೆಟ್ ಸರಣಿ ಆರಂಭವಾಗಲಿದ್ದು,  ಈ ವೇಳೆಗೆ ಟೀಂ ಇಂಡಿಯಾಗೆ ಹೊಸ ನಾಯಕನ ಆಯ್ಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ