ಟೀಂ ಹೋಟೆಲ್ ನಲ್ಲಿ ರಾಹುಲ್ ದ್ರಾವಿಡ್ ಅಸ್ವಸ್ಥ: ಬೆಂಗಳೂರಿಗೆ ವಾಪಸ್

ಶುಕ್ರವಾರ, 13 ಜನವರಿ 2023 (11:33 IST)
Photo Courtesy: Twitter
ಕೋಲ್ಕೊತ್ತಾ: ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ತಂಡ ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಅಸ್ವಸ್ಥರಾದ ಹಿನ್ನಲೆಯಲ್ಲಿ ಬೆಂಗಳೂರಿಗೆ ಮರಳು ಸಾಧ‍್ಯತೆಯಿದೆ.

ಎರಡು ದಿನದ ಹಿಂದಷ್ಟೇ ದ್ರಾವಿಡ್ ಟೀಂ ಇಂಡಿಯಾ ಆಟಗಾರರ ಜೊತೆ ಹೋಟೆಲ್ ನಲ್ಲಿ ಬರ್ತ್ ಡೇ ಆಚರಿಸಿದ್ದರು. ನಿನ್ನೆಯ ಪಂದ್ಯದ ವೇಳೆಯೂ ತಂಡದ ಜೊತೆಗೆ ಉಪಸ್ಥಿತರಿದ್ದರು.

ಆದರೆ ಅನಾರೋಗ್ಯದಿಂದಾಗಿ ಅವರು ತಂಡದ ಜೊತೆ ಮುಂದಿನ ಪಂದ್ಯಕ್ಕಾಗಿ ತಿರುವನಂತಪುರಂಗೆ ಪ್ರಯಾಣ ಬೆಳೆಸಿಲ್ಲ. ಬದಲಾಗಿ ಬೆಂಗಳೂರಿಗೆ ಮರಳಿದ್ದಾರೆ. ಮೂಲಗಳ ಪ್ರಕಾರ ಲೋ ಬಿಪಿಯಿಂದಾಗಿ ದ್ರಾವಿಡ್ ಅಸ್ವಸ್ಥರಾಗಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ