ಭಾರತ-ಪಾಕ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ: ದುಬೈನಲ್ಲಿ ಇಂದಿನ ಹವಾಮಾನ ಹೇಗಿದೆ ಗೊತ್ತಾ

Sampriya

ಭಾನುವಾರ, 23 ಫೆಬ್ರವರಿ 2025 (12:44 IST)
Photo Courtesy X
ದುಬೈ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಇಂದು ಹಾಲಿ ಚಾಂಪಿಯನ್‌ ಪಾಕಿಸ್ತಾನ ಮತ್ತು ಮಾಜಿ ಚಾಂಪಿಯನ್‌ ಭಾರತ ತಂಡಗಳು ಮುಖಾಮುಖಿಯಾಗುತ್ತವೆ. ಉಭಯ ತಂಡಗಳಿಗೂ ಇದು ಪ್ರತಿಷ್ಠೆಯ ಪಂದ್ಯವಾಗಿದೆ.

ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆದ್ದಿರುವ ರೋಹಿತ್‌ ಶರ್ಮಾ ಪಡೆ ಪಾಕ್‌ ವಿರುದ್ಧ ಗೆದ್ದ ಸೆಮಿಫೈನಲ್‌ ಸ್ಥಾನ ಭದ್ರಪಡಿಸುವ ಛಲದಲ್ಲಿದೆ. ಆತಿಥೇಯ ಪಾಕಿಸ್ಥನ ತಂಡವು ನ್ಯೂಜಿಲೆಂಡ್‌ ವಿರುದ್ಧ ಸೋತಿದ್ದು, ಸೆಮಿಫೈನಲ್‌ ಕನಸನ್ನು ಜೀವಂತವಾಗಿ ಉಳಿಸಲು ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಭಾರತ ತಂಡವು ಪಾಕ್‌ಗೆ ತೆರಳಲು ನಿರಾಕರಸಿದ್ದರಿಂದ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುತ್ತಿದೆ. ಭಾರತ ವಿರುದ್ಧ ಕಣಕ್ಕಿಳಿಯಲು ಪಾಕಿಸ್ತಾನ ತಂಡವು ದುಬೈಗೆ ಬಂದಿಳಿದಿದೆ. ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆಯಾ? ಇಂದಿನ ಹವಾಮಾನ ಹೇಗಿದೆ ನೋಡೋಣ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲಿದೆ. ಭಾರತದ ಪಂದ್ಯಕ್ಕಿಂತ ಕೆಲ ದಿನಗಳ ಹಿಂದೆ ದುಬೈನಲ್ಲಿ ಮಳೆಯಾಗಿತ್ತು. ಬಾಂಗ್ಲಾ ವಿರುದ್ಧ ಭಾರತದ ಪಂದ್ಯ ನಡೆದ ದಿನ ಮೋಡಕವಿದ ವಾತಾವರಣವಿತ್ತು. ಆದರೆ ಮಳೆಯಾಗಿಲ್ಲ. ಇದೀಗ ಪಾಕ್‌ ವಿರುದ್ಧದ ಪಂದ್ಯದ ದಿನ ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಮಧ್ಯಾಹ್ನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಪಂದ್ಯ ಆರಂಭ ಸಮಯದಲ್ಲಿ ತಾಪಮಾನವು ಸುಮಾರು 31 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ನಿರೀಕ್ಷೆ ಇದೆ. ನಂತರ ತಾಪಮಾನ ಇಳಿಯಲಿದೆ. ಆದರೆ, ಮಳೆ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ, ಉಭಯ ತಂಡಗಳ ಅಭಿಮಾನಿಗಳಿಗೆ ಇದು ಸಿಹಿಸುದ್ದಿಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ